ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 JANUARY 2024
SHIMOGA : ವಿದೇಶದಲ್ಲಿ ಕೆಲಸ ಮತ್ತು ವೀಸಾ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ನಾಲ್ವರು ಯುವಕರಿಂದ 4.23 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ. ಒಂದೂವರೆ ವರ್ಷವಾದರೂ ಕೆಲಸ, ವೀಸಾ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ರಾಯಚೂರಿನ ಸಯ್ಯದ್ ಜಾಹೀರುದ್ದೀನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಸಯ್ಯದ್ ಜಾಹೀರುದ್ದೀನ್ ಎಂಬಾತ ಶಿವಮೊಗ್ಗದ ನಾಲ್ವರು ಯುವಕರಿಗೆ ವಿದೇಶದಲ್ಲಿ ಕೆಲಸ ಮತ್ತು ವೀಸಾ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಗೂಗಲ್ ಪೇ ಮೂಲಕ ಮತ್ತು ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ. 2022ರ ನವೆಂಬರ್ನಲ್ಲಿ ಹಣ ಪಡೆದಿದ್ದು ಈತನಕ ಕೆಲಸವನ್ನು ಕೊಡಿಸದೆ, ಹಣವನ್ನು ಹಿಂತಿರುಗಿಸಿಲ್ಲ. ನಾಲ್ವರು ಯುವಕರಿಂದ ಒಟ್ಟು 4.23 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ- ಸಕ್ರೆಬೈಲು ಬಳಿ ಮರಕ್ಕೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಸಾವನ್ನಪ್ಪಿದ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿ
ಈ ಹಿನ್ನೆಲೆ ಆರೋಪಿ ಸಯ್ಯದ್ ಜಾಹೀರುದ್ದೀನ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422