ಕೇರಳ ಬಂಪರ್‌ ಲಾಟರಿ, ರಿಯಲ್‌ ಎಸ್ಟೇಟ್‌ ಉದ್ಯಮಿಗೆ 12 ಲಕ್ಷ ರೂ. ಬಹುಮಾನ, ಆಮೇಲೆ ಕಾದಿತ್ತು ಆಘಾತ

ಶಿವಮೊಗ್ಗ: ಕೇರಳ ಲಾಟರಿಯಲ್ಲಿ (Lottery) 12 ಲಕ್ಷ ರೂ. ಗೆದ್ದಿದ್ದೀರ ಎಂದು ನಂಬಿಸಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಗೆ 17.55 ಲಕ್ಷ ರೂ. ವಂಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಕೇರಳ ಲಾಟರಿ ಟಿಕೆಟ್‌ ಆನ್‌ಲೈನ್‌ ಮಾರಾಟ ಎಂದು ನಂಬಿಸಲಾಗಿತ್ತು. (ಈ ಸುದ್ದಿಯನ್ನು ಇನ್ನು 74 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರಿಯಲ್‌ ಎಸ್ಟೇಟ್‌ ಉದ್ಯಮಿಯು ಫೇಸ್‌ಬುಕ್‌ ವೀಕ್ಷಿಸುತ್ತಿದ್ದಾಗ ಕೇರಳ ಬಂಪರ್‌ ಲಾಟರಿ ಖರೀದಿಸಿದರೆ ಮೊದಲ ಬಹುಮಾನ 50 ಲಕ್ಷ ರೂ., ಎರಡನೇ ಬಹುಮಾನ 25 ಲಕ್ಷ ರೂ., ಮೂರನೇ ಬಹುಮಾನ 12 ಲಕ್ಷ ರೂ. ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಅದನ್ನು ಕ್ಲಿಕ್‌ ಮಾಡಿ, 80 ರೂ. ಪಾವತಿಸಿ ಎರಡು ಟಿಕೆಟ್‌ ಖರೀದಿಸಿದ್ದರು.

ಬಳಿಕ 510 ರೂ.ಗೆ 10 ಲಾಟರಿ ಟಿಕೆಟ್‌ ಖರೀದಿಸಬಹುದು ಎಂದು ನಂಬಿಸಿ ಫೋನ್‌ ಪೇ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ ಹಣ ಪಡೆಯಲಾಗಿತ್ತು.

12 ಲಕ್ಷದ ಲಾಟರಿ ಗೆದ್ದಿದ್ದೀರ

Arya-PU-College-Shimoga.

ಲಾಟರಿ ಟಿಕೆಟ್‌ ಖರೀದಿಸಿದ ದಿನವೇ ಮಧ್ಯಾಹ್ನದ ವೇಳೆಗೆ ರಿಯಲ್‌ ಎಸ್ಟೇಟ್‌ ಉದ್ಯಮಿಯ ವಾಟ್ಸಪ್‌ಗೆ, ನೀವು ಮೂರನೇ ಬಹುಮಾನ 12 ಲಕ್ಷ ರೂ. ಗೆದ್ದಿದ್ದೀರ ಎಂದು ಮೆಸೇಜ್‌ ಬಂದಿತ್ತು. ಬಹುಮಾನದ ಹಣ ಪಡೆಯಲು ಸೇವಾ ತೆರಿಗೆ, ಜಿಎಸ್‌ಟಿ ಕಟ್ಟಬೇಕು ಎಂದು ತಿಳಿಸಿ ಮೊದಲಿಗೆ 12 ಸಾವಿರ ರೂ. ಹಣವನ್ನು ಫೋನ್‌ ಪೇ ಮೂಲಕ ಕಟ್ಟಿಸಿಕೊಂಡಿದ್ದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್

20 ದಿನದ ಅಂತರದಲ್ಲಿ ನಾನಾ ಕಾರಣಗಳನ್ನು ಹೇಳಿಕೊಂಡು ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ 17.55 ಲಕ್ಷ ರೂ. ಹಣ ಪಡೆಯಲಾಗಿದೆ. ಪುನಃ 4 ಲಕ್ಷ ರೂ. ಹಣ ಹಾಕುವಂತೆ ಒತ್ತಾಯಿಸಿದಾಗ ಅನುಮಾನಗೊಂಡು ವಿಚಾರಿಸಿದಾಗ ತಾನು ಮೋಸ ಹೋಗಿರುವುದು ರಿಯಲ್‌ ಎಸ್ಟೇಟ್‌ ಉದ್ಯಮಿಯ ಅರಿವಿಗೆ ಬಂದಿದೆ.

ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Online-Fraud-Case-image

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment