ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 30 MAY 2024
SHIMOGA : ಮೆಕ್ಸಿಕೋ (Mexico) ದೇಶದಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಸಮಾವೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರೊಫೆಸರ್ (ಹೆಸರು ಗೌಪ್ಯ) ಒಬ್ಬರಿಗೆ 3.11 ಲಕ್ಷ ರೂ. ವಂಚಿಸಲಾಗಿದೆ. ಮೆಕ್ಸಿಕೋ ದೇಶಕ್ಕೆ ಹೋಗಿ ಬರಲು, ಅಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.
ಏನಿದು ಪ್ರಕರಣ?
ಅಂತಾರಾಷ್ಟ್ರೀಯ ಸಮಾವೇಶಕ್ಕೆ ಹೋಗಿ ಬರಲು ಮತ್ತು ಅಲ್ಲಿ ತಂಗುವ ವ್ಯವಸ್ಥೆ ಕುರಿತು ಪ್ರೊಫೆಸರ್ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಸಮಾವೇಶಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರೊಫಸರ್‌ನ ಪರಿಚಿತರೊಬ್ಬರಿಗೆ ಈ ಮೇಲ್ ಬಂದಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಪರಿಚಿತರಿಂದ ಈ ಮೇಲ್ ಐಡಿ ಪಡೆದು ಪ್ರೊಫೆಸರ್ ಮೇಲ್ ಕಳುಹಿಸಿದ್ದರು. ಅದಕ್ಕೆ ರಿಪ್ಲೆ ಮಾಡಿದ ವಂಚಕ ಮೆಕ್ಸಿಕೋಗೆ ಹೋಗಿ ಬರುವ, ತಂಗುವ ಮತ್ತು ಅಲ್ಲಿನ ಸ್ಥಳಗಳನ್ನು ತೋರಿಸಲು ಇಂತಿಷ್ಟು ಖರ್ಚು ವೆಚ್ಚವಾಗಲಿದೆ. ಅದರಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆ, ರಾತ್ರಿ ವೇಳೆ ಕಡು ಕತ್ತಲೆ, ರೋಡಲ್ಲೆ ಪಾರ್ಟಿ, ನಿವಾಸಿಗಳಿಗೆ ಭೀತಿ
ತಮ್ಮ ಬ್ಯಾಂಕ್ ಖಾತೆಗೆ 3.11 ಲಕ್ಷ ರೂ. ವರ್ಗಾಯಿಸುವಂತೆ ವಂಚಕ ಸೂಚಿಸಿದ್ದ. ಪ್ರೊಫೆಸರ್ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಈ ಮೇಲ್ ಮಾಡಿ, ಹಣ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಕೆಲವು ಸಮಯದ ಬಳಿ ಪ್ರೊಫಸರ್‌ಗೆ ಅನುಮಾನ ಬಂದು ಸಮಾವೇಶದ ಆಯೋಜಕರ ಬಳಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















