ವಿದೇಶಕ್ಕೆ ತೆರಳಲು ಸಿದ್ಧವಾಗಿದ್ದ ಶಿವಮೊಗ್ಗದ ಪ್ರೊಫೆಸರ್‌ಗೆ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

Published On : ಮೇ 30, 2024

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 30 MAY 2024

SHIMOGA : ಮೆಕ್ಸಿಕೋ (Mexico) ದೇಶದಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಸಮಾವೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರೊಫೆಸರ್‌ (ಹೆಸರು ಗೌಪ್ಯ) ಒಬ್ಬರಿಗೆ 3.11 ಲಕ್ಷ ರೂ. ವಂಚಿಸಲಾಗಿದೆ. ಮೆಕ್ಸಿಕೋ ದೇಶಕ್ಕೆ ಹೋಗಿ ಬರಲು, ಅಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.

ಏನಿದು ಪ್ರಕರಣ?

ಅಂತಾರಾಷ್ಟ್ರೀಯ ಸಮಾವೇಶಕ್ಕೆ ಹೋಗಿ ಬರಲು ಮತ್ತು ಅಲ್ಲಿ ತಂಗುವ ವ್ಯವಸ್ಥೆ ಕುರಿತು ಪ್ರೊಫೆಸರ್‌ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಸಮಾವೇಶಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರೊಫಸರ್‌ನ ಪರಿಚಿತರೊಬ್ಬರಿಗೆ ಈ ಮೇಲ್‌ ಬಂದಿತ್ತು. ಇದು ಗಮನಕ್ಕೆ  ಬರುತ್ತಿದ್ದಂತೆ ಪರಿಚಿತರಿಂದ ಈ ಮೇಲ್‌ ಐಡಿ ಪಡೆದು ಪ್ರೊಫೆಸರ್‌ ಮೇಲ್‌ ಕಳುಹಿಸಿದ್ದರು. ಅದಕ್ಕೆ ರಿಪ್ಲೆ ಮಾಡಿದ ವಂಚಕ ಮೆಕ್ಸಿಕೋಗೆ ಹೋಗಿ ಬರುವ, ತಂಗುವ ಮತ್ತು ಅಲ್ಲಿನ ಸ್ಥಳಗಳನ್ನು ತೋರಿಸಲು ಇಂತಿಷ್ಟು ಖರ್ಚು ವೆಚ್ಚವಾಗಲಿದೆ. ಅದರಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆ, ರಾತ್ರಿ ವೇಳೆ ಕಡು ಕತ್ತಲೆ, ರೋಡಲ್ಲೆ ಪಾರ್ಟಿ, ನಿವಾಸಿಗಳಿಗೆ ಭೀತಿ

ತಮ್ಮ ಬ್ಯಾಂಕ್‌ ಖಾತೆಗೆ 3.11 ಲಕ್ಷ ರೂ. ವರ್ಗಾಯಿಸುವಂತೆ ವಂಚಕ ಸೂಚಿಸಿದ್ದ. ಪ್ರೊಫೆಸರ್‌ ತಮ್ಮ ಬ್ಯಾಂಕ್‌ ಮ್ಯಾನೇಜರ್‌ಗೆ ಈ ಮೇಲ್‌ ಮಾಡಿ, ಹಣ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಕೆಲವು ಸಮಯದ ಬಳಿ ಪ್ರೊಫಸರ್‌ಗೆ ಅನುಮಾನ ಬಂದು ಸಮಾವೇಶದ ಆಯೋಜಕರ ಬಳಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 30, 2024

Leave a Comment