ಪ್ರಿಯಾ ಹೆಸರಿನ ಗ್ರೂಪ್‌ ಸೇರಿದ್ದ ಶಿವಮೊಗ್ಗದ ಯುವಕನಿಗೆ ಸ್ವಲ್ಪ ದಿನದ ಬಳಿಕ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಆನ್‌ಲೈನ್‌ ಜಾಬ್‌ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬನಿಗೆ 6.43 ಲಕ್ಷ ರೂ. ವಂಚಿಸಲಾಗಿದೆ. ಆನ್‌ಲೈನ್‌ ಜಾಬ್‌ (Online Job) ಎಂದು ವಾಟ್ಸಪ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂನಲ್ಲಿ ಪ್ರಿಯಾ ಎಂಬ ಗ್ರೂಪ್‌ಗೆ ಯುವಕನ ನಂಬರ್‌ ಜಾಯಿನ್‌ ಮಾಡಲಾಗಿತ್ತು.

ಬಳಿಕ ಯುವಕನ ವಿಳಾಸ ಸೇರಿದಂತೆ ಅಗತ್ಯ ಮಾಹಿತಿ ಪಡೆದು ರಿವ್ಯು ಮಾಡಿದರೆ ಸಂಬಳ ನೀಡುವುದಾಗಿ ನಂಬಿಸಲಾಯಿತು. ಆರಂಭದಲ್ಲಿ ಒಂದೆರಡು ಸ್ಕ್ರೀನ್‌ ಶಾಟ್‌ ಕಳುಹಿಸಿ ರಿವ್ಯು ಪಡೆದುಕೊಂಡರು. 100 ರೂ. ಅನ್ನು ಯುವಕನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. ಯುವಕನನ್ನು ಬೇರೊಂದು ಗ್ರೂಪ್‌ಗೆ ಸೇರಿಸಿ 2 ಸಾವಿರ ರೂ. ಹಣ ವರ್ಗಾಯಿಸಿ ರಿವ್ಯು ಮಾಡುವಂತೆ ಸೂಚಿಸಲಾಯಿತು. ಇದಕ್ಕೆ 2800 ರೂ. ಹಣವನ್ನು ಯುವಕನ ಬ್ಯಾಂಕ್‌ ಖ್ಯಾತೆಗೆ ವರ್ಗಾಯಿಸಿ ನಂಬಿಕೆ ಮೂಡಿಸಲಾಯಿತು.

SMS-Fraud-Shimoga-CEN-Police-Station.

ಬಳಿಕ ಅಧಿಕ ಲಾಭಾಂಶದ ಆಸೆ ಮೂಡಿಸಿ ವಿವಿಧ ಹಂತದಲ್ಲಿ ಯುವಕನ ಬ್ಯಾಂಕ್‌ ಖಾತೆಯಿಂದ 6.43 ಲಕ್ಷ ರೂ. ಹಣವನ್ನು ವಂಚಕರು ಪಡೆದಿದ್ದರು. ಕೊನೆಗೆ ಹಣ ಬಾರದ ಹಿನ್ನೆಲೆ ವಿಚಾರಿಸಿದಾಗ ನೀವು ನೀಡಿರುವ ಮಾಹಿತಿ ಸರಿ ಇಲ್ಲ ಎಂದು ಸಬೂಬು ಹೇಳಿದ್ದರು. ಅನುಮಾನಗೊಂಡ ಯುವಕ ದೂರು ನೀಡಿದ್ದು, ಸಿ.ಇ.ಎನ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಗುಡ್‌ ನ್ಯೂಸ್‌ ನೀಡಿದ ಕೆಎಸ್‌ಆರ್‌ಟಿಸಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment