ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಕಲಿ ದಾಖಲೆ (fake documents) ಸೃಷ್ಟಿಸಿ ಹಾಗೂ ವ್ಯಕ್ತಿಯೊಬ್ಬರ ನಟಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಆರೋಪಿಯೊಬ್ಬರಿಗೆ ಜಾಮೀನು ಕೊಡಿಸಿ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಅವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
2019 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಮೂರನೇ ಆರೋಪಿ ಮಧು ಎಂಬುವವರ ಪರವಾಗಿ ಕೆ. ರಾಜಣ್ಣ ಎಂಬುವವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಜಾಮೀನು ನೀಡಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿಯ ಜಮೀನಿನ ಆರ್.ಟಿ.ಸಿ, ಆಧಾರ್ ಕಾರ್ಡ್ ಹಾಗೂ ಅಫಿಡವಿಟ್ ಸಲ್ಲಿಸಲಾಗಿತ್ತು. 2019ರ ಜುಲೈ 9 ರಂದು ಕೆ. ರಾಜಣ್ಣ ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.
ಇದನ್ನೂ ಓದಿ – ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ
ಜಮೀನು ಪಡೆದ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದಿದ್ದಾಗ, ಜಾಮೀನುದಾರ ರಾಜಣ್ಣ ಅವರಿಗೆ ನೋಟಿಸ್ ಮತ್ತು ವಾರೆಂಟ್ ಜಾರಿಗೊಳಿಸಲಾಯಿತು. ಈ ವೇಳೆ ವಿಚಾರಣೆಗೆ ಹಾಜರಾದ ಅಸಲಿ ಜಮೀನು ಮಾಲೀಕ ಕೆ. ರಾಜಣ್ಣ ಅವರು, ತಾವು ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದು ಯಾರಿಗೂ ಜಾಮೀನು ನೀಡಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗದಲ್ಲಿ ಫೆಬ್ರವರಿ 21ರಂದು ಉದ್ಯೋಗ ಮೇಳ, ಪ್ರತಿಷ್ಠಿತ ಕಂಪನಿಗಳು ಭಾಗಿ, ಎಲ್ಲಿ?

- ಕೈದಿ ಭೇಟಿಗೆ ಬಂದ ವ್ಯಕ್ತಿ ತಂದಿದ್ದ ಟವಲ್ ಚೆಕ್ ಮಾಡಿದ ಭದ್ರತಾ ಸಿಬ್ಬಂದಿಗೆ ಶಾಕ್, ಏನಿತ್ತು ಟವಲ್ನಲ್ಲಿ?

- ಶಿವಮೊಗ್ಗದಲ್ಲಿ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

- ದಾಖಲೆಯು ಡೂಪ್ಲಿಕೇಟ್, ಜಾಮೀನು ಕೊಡಲು ಬಂದ ವ್ಯಕ್ತಿಯು ಡ್ಯೂಪ್ಲಿಕೇಟ್, ದಾಖಲಾಯ್ತು ಕೇಸ್? ಆಗಿದ್ದೇನು?

- ಚಂದ್ರಗುತ್ತಿ ರೇಣುಕಾಂಬಾ ದೇಗುಲದಲ್ಲಿ ಕಾಣಿಕೆ ಎಣಿಕೆ, ಹುಂಡಿಯಲ್ಲಿ ಎಷ್ಟಿತ್ತು?

About The Editor
ನಿತಿನ್ ಆರ್.ಕೈದೊಟ್ಲು






