ಕೈದಿ ಭೇಟಿಗೆ ಬಂದ ವ್ಯಕ್ತಿ ತಂದಿದ್ದ ಟವಲ್‌ ಚೆಕ್‌ ಮಾಡಿದ ಭದ್ರತಾ ಸಿಬ್ಬಂದಿಗೆ ಶಾಕ್‌, ಏನಿತ್ತು ಟವಲ್‌ನಲ್ಲಿ?

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬ ಟವಲ್‌ನಲ್ಲಿ (towel) ಗಾಂಜಾ ಅಡಗಿಸಿ ಜೈಲಿನೊಳಗೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಫೆಬ್ರವರಿ 13ರ ಸಂಜೆ ಘಟನೆ ನಡೆದಿದೆ.

ಕೈದಿ ಮಹ್ಮದ್ ಅಫ್ಜಲ್ ಭೇಟಿಗೆ ಭದ್ರಾವತಿಯ ಹೊಸೂರು ನಿವಾಸಿ ಅಬ್ದುಲ್ ರಜಾಕ್ ಎಂಬಾತ ಬಂದಿದ್ದ. ಕಾರಾಗೃಹದ ಆಕ್ಸೆಸ್ ಕಂಟ್ರೋಲ್ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಅಬ್ದುಲ್ ರಜಾಕ್, ಕೈದಿ ಮಹ್ಮದ್‌ ಅಫ್ಜಲ್‌ಗೆ ಕೊಡಲು ತಂದಿದ್ದ ಬಟ್ಟೆಗಳ ತಪಾಸಣೆ ನಡೆಸಿದರು. ಒಂದು ಟವಲ್‌ನ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಕಂಡುಬಂದಿದೆ.

Shimoga-Central-Jail-Front-General-Image

ಕೂಡಲೇ ಟವಲ್‌ನ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ಗಾಂಜಾ ಮತ್ತು ಟವಲ್ ಅನ್ನು ವಶಪಡಿಸಿಕೊಂಡು, ಅಬ್ದುಲ್ ರಜಾಕ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಗೋಲ್ಡ್ ಶೋ ರೂಂನಲ್ಲಿ 6 ಲಕ್ಷದ ಸರ ಮಿಸ್ಸಿಂಗ್‌, CCTV ಚೆಕ್‌ ಮಾಡಿದಾಗ ಸತ್ಯ ಬಯಲು

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 20, 2026 at 10:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 20, 2026

Leave a Comment