ಶಿವಮೊಗ್ಗದಲ್ಲಿ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

ಶಿವಮೊಗ್ಗ: ನಗರದ ಕೀಟನಾಶಕ ಮಾರಾಟ ಮಳಿಗೆಯೊಂದರ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆಯ (agriculture department) ಜಾಗೃತದಳದ ಸಿಬ್ಬಂದಿ ₹17 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಕೀಟನಾಶಕ ಜಪ್ತಿ ಮಾಡಿದ್ದಾರೆ.

ವಿನೋಬನಗರದ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ಮಾಡಿದ ಜಾಗೃತ ದಳ ತಂಡವು ಮಳಿಗೆಯಲ್ಲಿ ಗುಜರಾತ್ ಕಂಪನಿಯ ಬ್ಯಾಟಲ್ ಎಂಬ 1008 ಕೆ.ಜಿ ಪೀಡೆನಾಶಕ ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿದೆ. ಸಿಐಆರ್ ಸಂಖ್ಯೆ ಹಾಗೂ ತಯಾರಿಕಾ ಪರವಾನಗಿ ಸಂಖ್ಯೆಯನ್ನು ನಮೂದಿಸದೇ ಈ ಪೀಡೆನಾಶಕವನ್ನು ದಾಸ್ತಾನು ಮಾಡಲಾಗಿತ್ತು. ಅಲ್ಲದೇ ಮಾರಾಟ ಮಾಡಲಾಗುತ್ತಿತ್ತು. ಇದರ ಖಚಿತ ಮಾಹಿತಿ ಮೇರೆಗೆ ಜಾಗೃತ ದಳ ತಂಡ ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದೆ.

Agriculture-officers-raid-on-pesticide-shop

ಇದು ಕೀಟನಾಶಕ ಅಧಿನಿಯಮ 1968 ಹಾಗೂ ಕೀಟ ನಾಶಕ ಕಾಯ್ದೆ 1971ರ ಉಲ್ಲಂಘನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಗೋಲ್ಡ್ ಶೋ ರೂಂನಲ್ಲಿ 6 ಲಕ್ಷದ ಸರ ಮಿಸ್ಸಿಂಗ್‌, CCTV ಚೆಕ್‌ ಮಾಡಿದಾಗ ಸತ್ಯ ಬಯಲು

ಈ ದಾಳಿಯು ಮೈಸೂರು ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆಯಿತು. ದಾಳಿ ಮಾಡಿದ ತಂಡದಲ್ಲಿ ಮೈಸೂರಿನ ಸಹಾಯಕ ಕೃಷಿ ನಿರ್ದೇಶಕರಾದ ಜಗದೀಶ್ ಯಾದವ ಬಾಬು, ಶಿವಮೊಗ್ಗದ ಬಿ.ಸಿ.ಶಶಿಧರ್ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣಶೆಟ್ಟಿ, ತಾಂತ್ರಿಕ ಅಧಿಕಾರಿ ಸಿ.ಜೆ.ಚೇತನ್, ಕೃಷಿ ಅಧಿಕಾರಿ ಸುನೀಲ್ ಪಾಲ್ಗೊಂಡಿದ್ದರು.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 20, 2026 at 9:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 20, 2026

Leave a Comment