ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | HOSANAGARA NEWS | 21 ಅಕ್ಟೋಬರ್ 2020
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ತೀರ್ಥಹಳ್ಳಿ ಮತ್ತು ಹೊಸನಗರ ವಲಯ ಅಧಿಕಾರಿಗಳು ದಾಳಿ ನಡೆಸಿ, ಶುಂಠಿ ಗಿಡಗಳ ನಡುವೆ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡು ಕಡೆ ದಾಳಿ ನಡೆಸಿ, 67 ಹಸಿ ಗಾಂಜಾ ಗಿಡಗಳನ್ನು ಸೀಜ್ ಮಾಡಲಾಗಿದೆ.
ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಳ್ಳಿಯ ನಾಗರಾಜ್ ಎಂಬುವವರ ಶುಂಠಿ ಹೊಲದಲ್ಲಿ 31 ಗಾಂಜಾ ಗಿಡ ಪತ್ತೆಯಾಗಿದೆ. ಶೇಖರಪ್ಪ ಎಂಬುವವರ ಹೊಲದಲ್ಲಿ 36 ಗಾಂಜಾ ಗಿಡಗಳು ಪತ್ತೆಯಾಗಿವೆ.
ಗಾಂಜಾ ಗಿಡಗಳನ್ನು ಸೀಜ್ ಮಾಡಿ, ಇಬ್ಬರ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಸಂತೋಷ್ ಕುಮಾರ, ಉಪ ನಿರೀಕ್ಷಕ ರಂಗನಾಥ ಅಮಿತ್ ಕುಮಾರ್, ಅಬಕಾರಿ ರಕ್ಷಕರಾದ ಮಲ್ಲಿಕಾ, ರಾಕೇಶ್, ನಾಗರಾಜ, ಪಾಂಡು, ಅಂಬವ್ವ ಗೋಳ, ಪ್ರಭಾಕರ, ಉಮೇಶ ಹಾಗೂ ಪ್ರಸನ್ನ ದಾಳಿಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422