ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 APRIL 2024
SAGARA : ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಬಳಿ ಬೈಕ್ನಲ್ಲಿ ಬಂದ ಅಪರಿಚಿತರು ವಿಳಾಸ ಕೇಳುವಂತೆ ನಟಿಸಿ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಾಗರದ ಅಣಲೆಕೊಪ್ಪ ಬಡಾವಣೆಯ ರಾಬಿಯಾ ಮಸೀದಿ ಬಳಿ ಘಟನೆ ನಡೆದಿದೆ.
ಅಪರಿಚಿತರು ಶಿರವಾಳ ಗ್ರಾಮದ ಕಡೆಯಿಂದ ಬೈಕ್ನಲ್ಲಿ ಬಂದಿದ್ದರು. ವಿಳಾಸ ಕೇಳುವ ನೆಪದಲ್ಲಿ ಶಾಂತಮ್ಮ ಎಂಬುವರ ಮಾಂಗಲ್ಯ ಸರ ಕೀಳಲು ಮುಂದಾಗಿದ್ದಾರೆ. ಶಾಂತಮ್ಮ ಪ್ರತಿರೋಧ ವ್ಯಕ್ತಪಡಿಸಿದಾಗ 40 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ 23 ಗ್ರಾಂ ಸರದ ತುಂಡನ್ನು ಕಳ್ಳರು ಎಗರಿಸಿದ್ದಾರೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಾಗರದಲ್ಲಿ ಆಟವಾಡುತ್ತ ಆಯಾತಪ್ಪಿ ಬಾವಿಗೆ ಬಿದ್ದ ಮಗು, ಸಾವು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422