ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಮನೆ ಮುಂದೆ ರಂಗೋಲೆ ಹಾಕುವಾಗ ಕಳ್ಳನೊಬ್ಬ ಮಹಿಳೆಯೊಬ್ಬರ ಚಿನ್ನದ ಸರ (Gold Chain) ಕಸಿದು ಪರಾರಿಯಾಗಿದ್ದಾನೆ. ಆಲ್ಕೊಳದ ಮಂಗಳ ಮಂದಿರ ಸಮೀಪದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ.
ಅನಸೂಯಮ್ಮ ಎಂಬುವವರು ಮನೆ ಮುಂದೆ ರಂಗೋಲೆ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಮನೆ ಖಾಲಿ ಇದೆಯಾ ಎಂದು ವಿಚಾರಿಸಿದ್ದ. ನಂತರ ನೀರು ತರಿಸಿಕೊಂಡು ಕುಡಿದ ಆತ ಲೋಟ ಹಿಂತಿರುಗಿಸುವಂತೆ ಮಾಡಿ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಸಿದಿದ್ದಾನೆ. ತಾಗು ತಂದಿದ್ದ ಬೈಕ್ ಹತ್ತಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
₹49,500 ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ





