ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿಳಾಸ ಕೇಳುವ ನೆಪದಲ್ಲಿ ರತ್ನಮ್ಮ ಎಂಬವವರ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ (Gold Chain) ಕಸಿದು ಪರಾರಿಯಾಗಿದ್ದಾರೆ. ವಿನೋಬನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.
ರತ್ನಮ್ಮ ಅವರು ದೇವಸ್ಥಾನದಿಂದ ಹಿಂತಿರುಗಿ ಮನೆಯ ಕಾಂಪೌಂಡ್ ಒಳಗೆ ಬಂದು ಗೇಟ್ ಹಾಕುತ್ತಿದ್ದಾಗ ಯುವಕನೊಬ್ಬ ವಿಳಾಸ ಕೇಳುವವನಂತೆ ಬಂದಿದ್ದ. ಶಿವಣ್ಣನ ಮನೆ ಎಲ್ಲಿ ಎಂದು ವಿಚಾರಿಸಿದ್ದ. ತಕ್ಷಣ ರತ್ನಮ್ಮ ಅವರ ಕೊರಳಿಗೆ ಕೈ ಹಾಕಿ ₹2.20 ಲಕ್ಷ ಮೌಲ್ಯದ 70 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಓಡಿದ್ದಾನೆ. ಬೈಕಿನಲ್ಲಿ ಬಂದಿದ್ದ ಮತ್ತೊಬ್ಬ ಯುವಕನೊಂದಿಗೆ ಪರಾರಿಯಾದ ಎಂದು ಆರೋಪಿಸಲಾಗಿದೆ.
ಚಿನ್ನದ ಸರ ಕಸಿದುಕೊಂಡವನು ಅಂದಾಜು 30 ವರ್ಷದವನಿರಬೇಕು ಎಂದು ಆರೋಪಿಸಿ ದೂರು ನೀಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಮಹಿಳೆಗೆ ದುರ್ಗಿಗುಡಿಯ ವಶೀಕರಣ ಜ್ಯೋತಿಷಿ ಕೊಟ್ಟ ಮಡಿಕೆ, ಮನೆಯಲ್ಲಿ ತೆಗೆದಾಗ ಕಾದಿತ್ತು ಶಾಕ್






