SHIVAMOGGA LIVE NEWS, 18 JANUARY 2025
ಶಿವಮೊಗ್ಗ : ಪಿಇಎಸ್ ಶಿಕ್ಷಣ ಸಂಸ್ಥೆಯ ಅನ್ವೇಷಣಾ ಇನ್ನೋವೇಶನ್ ಹಾಗೂ ಎಂಟರ್‌ಪ್ರಿನ್ಯೊರಿಯಲ್ ಫೋರಂನಿಂದ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಮಲ್ನಾಡ್ ಸ್ಟಾರ್ಟ್‌ಅಪ್ (Start Up) ಸಮ್ಮೇಳನ ನಡೆಯಿತು. ಕೇಂದ್ರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮ ಉದ್ಘಾಟಿಸದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಕೇಂದ್ರ ಸಚಿವರು ಏನೆಲ್ಲ ಹೇಳಿದರು?
ಗ್ರಾಮೀಣ ಭಾಗದಲ್ಲಿ ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆ ಇರುತ್ತದೆ. ಆದರೆ ಅದೇ ಉತ್ಪನ್ನಗಳ ಬೆಲೆ ಮಹಾನಗರಗಳಲ್ಲಿ ದುಬಾರಿ ಇರಲಿದೆ. ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಈ ಲಾಭವನ್ನು ರೈತರಿಗೆ ಕೊಡಿಸಲು ಕೇಂದ್ರ ಸರ್ಕಾರ ಕೆಲಸ ಮಾಡಲಿದೆ. ವಿವಿಧೆಡೆಗೆ ಕಳುಹಿಸುವ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚವನ್ನು ಕೇಂದ್ರ ಸರ್ಕಾರವೆ ಭರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಬ್ರಾಂಡಿಂಗ್, ಮೌಲ್ಯವರ್ಧನೆ ಮುಖ್ಯ. ಈ ಎಲ್ಲವುಗಳಿಗೆ ಸ್ಟಾರ್ಟ್ಅಪ್‌ಗಳು ಸಹಾಯ ಮಾಡಲಿವೆ. ರಾಜ್ಯದಲ್ಲಿ ಆಹಾರೋತ್ಪನ್ನಗಳ ಉದ್ಯಮ ಉತ್ತಮ ಕೆಲಸ ಮಾಡುತ್ತಿವೆ. ಕೃಷಿ ಸಂಬಂಧಿತ ವಲಯದಲ್ಲಿ ಸೃಜನಶೀಲ ಸಂಶೋಧನೆಗಳಿದ್ದರೆ, ಆ ಬಗ್ಗೆ ಮಾಹಿತಿ ನೀಡಿ. ನಾವು ಅದಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಆರ್ಥಿಕತೆ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಭಾರತೀಯ ಆರ್ಥಿಕತೆಗೆ ರೈತರೆ ಆಧಾರ. ದೇಶದ ಜನಸಂಖ್ಯೆಯ ಶೇ.55 ರಷ್ಟು ಜನ ಕೃಷಿ ಹಾಗೂ ಸಂಬಂಧಿತ ವಲಯದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ರೈತರಿಲ್ಲದಿದ್ದರೆ ದೇಶ ನಡೆಯಲು ಸಾಧ್ಯವಿಲ್ಲ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ಈ ವರ್ಷ ಕೃಷಿ ಹಾಗೂ ಸಂಬಂಧಿತ ವಲಯದ ಬೆಳವಣಿಗೆ ಹೆಚ್ಚಲಿದೆ. ಕೃಷಿಯನ್ನು ಲಾಭದಾಯಕ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದರು.
ರೈತರ ಬೆಳೆಗಳ ಇಳುವರಿ ಹೇಗೆ ಹೆಚ್ವಿಸಬೇಕು ಎಂಬ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ. ನೂರಕ್ಕು ಹೆಚ್ಚು ಉತ್ಕೃಷ್ಟ ತಳಿಯ ಆಹಾರ ಬೆಳೆಯ ಬೀಜಗಳನ್ನು ಸಂಶೋಧನೆ ನಡೆಸಿ, ರೈತರಿಗೆ ನೀಡಲಾಗಿದೆ. ಸ್ಟಾರ್ಟ್ಅಪ್‌ಗಳು ಉತ್ಪಾದನಾ ವೆಚ್ಚ ಹೇಗೆ ಕಡಿಮೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ರೈತರ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ರಸಗೊಬ್ಬರಕ್ಕೆ 2 ಲಕ್ಷ ಕೋಟಿ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಕೇಂದ್ರ ಕೃಷಿ ಸಚಿವರು ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ನೀಡಿ, ಜಿಲ್ಲೆಗೆ ಆಗಮಿಸಿದ್ದಾರೆ. ನವೋದ್ಯಮಕ್ಕೆ ಸಹಾಯ ಸಿಗಬೇಕು. ರೈತರು ಸ್ವಯಂ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂಬ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಆಹಾರ ಉದ್ಯಮದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ 100 ಕೋಟಿ ರೂ. ಆದಾಯದ ಗುರಿ ಇದೆ. ಹಾಗಾಗಿಆಹಾರ ಬೆಳೆಗಳಿಗೂ ಹವಾಮಾನ ಆಧಾರಿತ ವಿಮೆ ಪದ್ಧತಿಯನ್ನು ಕೃಷಿ ಸಚಿವರು ಜಾರಿಗೆ ತರಬೇಕು. ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ100 ಕೋಟಿಯ ಆದಾಯದ ಗುರಿ
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ಅನ್ವೇಷಣಾ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ್, ಪಿಇಎಸ್ ಟ್ರಸ್ಟ್ ಸಿಇಒ ಬಿ.ಆರ್. ಸುಭಾಷ್, ಪ್ರಮುಖರಾದ ಟಿ.ಡಿ.ಮೇಘರಾಜ್, ದಿಶಾ, ಮಾಜಿ ಶಾಸಕರಾದ ಕೆ.ಜಿ.ಕುಮಾರ ಸ್ವಾಮಿ, ಎಸ್.ರುದ್ರೇಗೌಡ, ಎಫ್‌ಬಿಒ ಪದಾಧಿಕಾರಿಗಳಿದ್ದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿ ಬಸ್ಸುಗಳ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್