ವಿದ್ಯಾನಗರ ಫ್ಲೈ ಓವರ್‌ ಕೆಳಗೆ ‘ಚಿನ್ನದ ನಾಣ್ಯʼಗಳಿರುವ ಚೀಲ ಕೊಟ್ಟು ಗಡಿಬಿಡಿಯಲ್ಲಿ ಹೋದ ಉಡುಪಿಯ ವ್ಯಕ್ತಿ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ವಿದ್ಯಾನಗರ ಫ್ಲೈಓವರ್‌ನ ಕೆಳಗೆ ನಕಲಿ ಚಿನ್ನದ ನಾಣ್ಯಗಳನ್ನು (Gold Coins) ನೀಡಿ ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬರಿಗೆ ₹4 ಲಕ್ಷ ವಂಚಿಸಲಾಗಿದೆ.

ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪಸ್ಪುಲಾ ವಂಶಿ ಎಂಬುವವರು ವಂಚನೆಗೊಳಗಾಗಿದ್ದಾರೆ. ಪಸ್ಪುಲಾ ವಂಶಿಗೆ ಉಡುಪಿಯ ಸುರೇಶ್‌ ಎಂಬಾತನ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಸುರೇಶ ಕರೆ ಮಾಡಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ತಿಳಿಸಿದ್ದ. ಚಿತ್ರದುರ್ಗಕ್ಕೆ ಕರೆಯಿಸಿಕೊಂಡು ಎರಡು ನಾಣ್ಯಗಳನ್ನು ಕೊಟ್ಟು ಕಳುಹಿಸಿದ್ದ. ತಮ್ಮೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಆ ಎರಡು ನಾಣ್ಯಗಳು ಚಿನ್ನದ್ದು ಎಂದು ಖಚಿತವಾಗಿತ್ತು.

ಅ.16ರಂದು ಪಸ್ಪುಲಾ ವಂಶಿಯನ್ನು ಶಿವಮೊಗ್ಗಕ್ಕೆ ಕರೆಯಿಸಿಕೊಂಡ ಸುರೇಶ್‌ ಚಿನ್ನದ ನಾಣ್ಯಗಳಿರುವ ಚೀಲವನ್ನು ಹಸ್ತಾಂತರ ಮಾಡಿದ್ದ. ₹4 ಲಕ್ಷ ಹಣ ಪಡೆದು ಗಡಿಬಿಡಿಯಲ್ಲಿ ಸ್ಥಳದಿಂದ ತೆರಳಿದ್ದ. ಪಸ್ಪುಲಾ ವಂಶಿ ತಮ್ಮೂರಿಗೆ ಮರಳಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಕುಟುಂಬದವರ ಜೊತೆಗೆ ಚರ್ಚಿಸಿ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಸ್ಪರ್ಧೆ ವೇಳೆ ಬಸ್‌ಗೆ ಡಿಕ್ಕಿಯಾಗಿ ಹೋರಿ ಸಾವು, ಹೇಗಾಯ್ತು ಘಟನೆ?

Gold Coins

Leave a Comment