ಗೃಹಪ್ರವೇಶಕ್ಕೆ ತೆರಳಲು ರೆಡಿಯಾಗಲು ಬೀರು ತೆಗೆದ ಗೃಹಿಣಿಗೆ ಕಾದಿತ್ತು ಆಘಾತ, ಆಗಿದ್ದೇನು?

SHIVAMOGGA LIVE NEWS, 3 FEBRUARY 2025➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ (gold) ನಾಪತ್ತೆಯಾಗಿವೆ ಎಂದು ಆರೋಪಿಸಿ ಅಶೋಕ ನಗರ ನಿವಾಸಿ ಗೀತಾ ಎಂಬುವವರು ದೂರು ನೀಡಿದ್ದಾರೆ. ಗೃಹ ಪ್ರವೇಶ ಸಮಾರಂಭಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುವಾಗ ಕಳ್ಳತನ ಬೆಳಕಿಗೆ ಬಂದಿದೆ.

ಅಶೋಕ ನಗರದ ಗೀತಾ ಎಂಬುವವರ ಮನೆ ಬೀರುವಿನಲ್ಲಿದ್ದ ಚಿನ್ನಾಭರಣಗಳ ಪೈಕಿ 10 ಗ್ರಾಂ ತೂಕದ ಜುಮುಕಿ ಮತ್ತು 10 ಗ್ರಾಂ ತೂಕದ ಬಂಗಾರದ ಮಾಟಿ ನಾಪತ್ತೆಯಾಗಿವೆ. ಕುಟುಂಬದವರನ್ನು ವಿಚಾರಿಸಿದಾಗ ಯಾರಿಗು ಇದರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾಗಿ ಆರೋಪಿಸಲಾಗಿದೆ.

Crime-News-General-Image

ಜ.18 ರಿಂದ ಜ.24ರವರೆಗೆ ಗೀತಾ ಅವರು ಮನೆಯಲ್ಲಿರಲಿಲ್ಲ. ಆಗ ಕಳ್ಳರು ಒಳನುಗ್ಗಿ 90 ಸಾವಿರ ರೂ. ಮೌಲ್ಯದ ಈ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prashanth-Loan-Advertisement.

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ಈ ದಿನ?

Leave a Comment