ಮದುವೆ ಸಮಾರಂಭ ಮುಗಿಸಿ ಕಲ್ಯಾಣ ಮಂಟಪದ ರೂಮ್‌ಗೆ ಬಂದ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ (gold) ಕಳ್ಳತನವಾಗಿದೆ. ನಗರದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪದಲ್ಲಿ ಘಟನೆ ಸಂಭವಿಸಿದೆ.

ಅರಸೀಕೆರೆಯ ಮೆಹಬೂಬ ಪಾಷಾ ಅವರ ಕುಟುಂಬ, ಸಂಬಂಧಿಯ ಮದುವೆಗೆ ಬಂದಿದ್ದರು. ಕಲ್ಯಾಣ ಮಂಟಪದ ಕೊಠಡಿಯಲ್ಲಿ ಬ್ಯಾಗ್‌ಗಳನ್ನು ಇರಿಸಿ, ಸಭಾಂಗಣಕ್ಕೆ ತೆರಳಿದ್ದರು. ರಾತ್ರಿ ಕೊಠಡಿಗೆ ಹಿಂತಿರುಗಿದಾಗ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

ಬಂಗಾರದ ಮಾಂಗಲ್ಯ ಸರ, ಚಿನ್ನದ ಸರ ಮತ್ತು ಪೆಂಡೆಂಟ್‌, ಉಂಗುರಗಳು, ಮಕ್ಕಳ ಉಂಗುರಗಳು, ಕಿವಿ ಓಲೆಗಳು ಸೇರಿ ಒಟ್ಟು 71 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. 4.97 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image

ಇದನ್ನೂ ಓದಿ » UPSC 2024 ಫಲಿತಾಂಶ: 1000ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆ, ಕರ್ನಾಟಕದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment