ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಬಂಗಾರದ ಆಭರಣಗಳನ್ನು ಹೊಳೆಯುವಂತೆ ಪಾಲಿಶ್ (Gold Polishing) ಮಾಡಿಕೊಡುವುದಾಗಿ ನಂಬಿಸಿ, ಮನೆಯವರ ಕಣ್ಣೆದುರೇ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಶಿವಮೊಗ್ಗದ ಅಲ್ ಹರೀಮ್ ಲೇಔಟ್‌ನಲ್ಲಿ ನಡೆದಿದೆ.
ಫರ್ಹಾನ್ ಬೇಗಂ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ತಾವು ಬಂಗಾರ ಮತ್ತು ಹಿತ್ತಾಳೆ ವಸ್ತುಗಳನ್ನು ಪಾಲಿಶ್ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಫರ್ಹಾನ್ ಬೇಗಂ ಅವರ ಅತ್ತೆ, ತಮ್ಮ ಬಳಿಯಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ ಚಿನ್ನದ ಉಂಗುರವನ್ನು ಪಾಲಿಶ್ ಮಾಡಲು ನೀಡಿದ್ದಾರೆ. ಆರೋಪಿಗಳು ತಾವು ತಂದಿದ್ದ ಒಂದು ಸಣ್ಣ ಬಾಕ್ಸ್‌ನೊಳಗೆ ಚಿನ್ನಾಭರಣಗಳನ್ನು ಹಾಕಿ, ಅದಕ್ಕೆ ಬಣ್ಣದ ಪೌಡರ್ ಮತ್ತು ನೀರನ್ನು ಬೆರೆಸಿದ್ದಾರೆ.

ನಂತರ ಬಾಕ್ಸ್ ಮುಚ್ಚಳವನ್ನು ಹಾಕಿ, ಇದನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ, ನಂತರ ತೆಗೆಯಿರಿ, ಬಂಗಾರ ಪಾಲಿಶ್ ಆಗಿರುತ್ತದೆ ಎಂದು ಹೇಳಿ ಆ ಬಾಕ್ಸ್ ಅನ್ನು ದೂರುದಾರರಿಗೆ ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಸೆಂಟ್ರಲ್ ಜೈಲ್ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್
ಆ ಬಾಕ್ಸ್ ಅನ್ನು ಬಿಸಿ ಮಾಡಿ ತೆರೆದು ನೋಡಿದಾಗ ಅದರೊಳಗೆ ಆಭರಣಗಳು ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ₹2,80,000 ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು















