ಮಹಿಳೆಯರೆ ಹುಷಾರ್‌, ಶಿವಮೊಗ್ಗದಲ್ಲಿ ಡಬ್ಬಿ ಚಮತ್ಕಾರ, ಮರಳಾದರೆ ಚಿನ್ನಾಭರಣವೇ ಮಾಯ, ಏನಿದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಬಂಗಾರದ ಆಭರಣಗಳನ್ನು ಹೊಳೆಯುವಂತೆ ಪಾಲಿಶ್ (Gold Polishing) ಮಾಡಿಕೊಡುವುದಾಗಿ ನಂಬಿಸಿ, ಮನೆಯವರ ಕಣ್ಣೆದುರೇ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಶಿವಮೊಗ್ಗದ ಅಲ್ ಹರೀಮ್ ಲೇಔಟ್‌ನಲ್ಲಿ ನಡೆದಿದೆ.

ಫರ್ಹಾನ್ ಬೇಗಂ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ತಾವು ಬಂಗಾರ ಮತ್ತು ಹಿತ್ತಾಳೆ ವಸ್ತುಗಳನ್ನು ಪಾಲಿಶ್ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಫರ್ಹಾನ್‌ ಬೇಗಂ ಅವರ ಅತ್ತೆ, ತಮ್ಮ ಬಳಿಯಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ ಚಿನ್ನದ ಉಂಗುರವನ್ನು ಪಾಲಿಶ್ ಮಾಡಲು ನೀಡಿದ್ದಾರೆ. ಆರೋಪಿಗಳು ತಾವು ತಂದಿದ್ದ ಒಂದು ಸಣ್ಣ ಬಾಕ್ಸ್‌ನೊಳಗೆ ಚಿನ್ನಾಭರಣಗಳನ್ನು ಹಾಕಿ, ಅದಕ್ಕೆ ಬಣ್ಣದ ಪೌಡರ್ ಮತ್ತು ನೀರನ್ನು ಬೆರೆಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Crime-News-General-Image

ನಂತರ ಬಾಕ್ಸ್ ಮುಚ್ಚಳವನ್ನು ಹಾಕಿ, ಇದನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ, ನಂತರ ತೆಗೆಯಿರಿ, ಬಂಗಾರ ಪಾಲಿಶ್ ಆಗಿರುತ್ತದೆ ಎಂದು ಹೇಳಿ ಆ ಬಾಕ್ಸ್ ಅನ್ನು ದೂರುದಾರರಿಗೆ ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ.

Crime-News-General-Image

ಇದನ್ನೂ ಓದಿ – ಶಿವಮೊಗ್ಗದ ಸೆಂಟ್ರಲ್‌ ಜೈಲ್‌ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್

ಆ ಬಾಕ್ಸ್ ಅನ್ನು ಬಿಸಿ ಮಾಡಿ ತೆರೆದು ನೋಡಿದಾಗ ಅದರೊಳಗೆ ಆಭರಣಗಳು ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ₹2,80,000 ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JNNCE-COLLEGE-ADVT.

Leave a Comment