SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ವ್ಯಾನಿಟಿ ಬ್ಯಾಗುಗಳಿಂದ ನಗದು, ಚಿನ್ನಾಭರಣ (Gold) ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಹರಿಹರದಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದಿಳಿದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ತಸ್ನೀಮ್ ಸುಲ್ತಾನಾ ಎಂಬುವವರು ಹರಿಹರದಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದಿದ್ದರು. ಬಸ್ ಇಳಿಯುವಾಗ ಜನ ದಟ್ಟಣೆ ಹೆಚ್ಚಿತ್ತು. ಈ ಸಂದರ್ಭ ತಸ್ನೀಮ್ ಸುಲ್ತಾನಾ ಅವರ ವ್ಯಾನಿಟಿ ವ್ಯಾಗ್‌ನಿಂದ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಸರ, ಎರಡು ಚಿನ್ನದ ಉಂಗುರ, 7 ಸಾವಿರ ರೂ. ನಗದು, ಎಟಿಎಂ ಕಾರ್ಡ್ ಕಳ್ಳತನವಾಗಿದೆ.

ಒಟ್ಟು 2.24 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಕಾರು, ಬೈಕ್ ಅಪಘಾತದ CCTV ದೃಶ್ಯ ಲಭ್ಯ, ಹೇಗಾಯ್ತು ಘಟನೆ? ಏನೇನೆಲ್ಲ ಆಯ್ತು?