ಶಿವಮೊಗ್ಗ: ATM ಮೆಷಿನ್‌ನಲ್ಲಿ ಡ್ರಾ ಮಾಡಿದ ಹಣ ಬಾರದೆ ಇರುವ ಕುರಿತು ಮೂರು ಪ್ರತ್ಯೇಕ ದೂರು ಬಂದ ಹಿನ್ನೆಲೆ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಗಮ್ ಟೇಪ್ ಮಾದರಿ ವಸ್ತು ಅಂಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕನ ವಿರುದ್ಧ ಕೆನರಾ ಬ್ಯಾಂಕ್ ಸಿಬ್ಬಂದಿ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಮೇ 13ರಂದು ಮೂರು ಪ್ರತ್ಯೇಕ ಗ್ರಾಹಕರು ಪ್ರತ್ಯೇಕ ಸಮಯದಲ್ಲಿ ಎಟಿಎಂನಿಂದ ಹಣ ಬಿಡಿಸಿಕೊಳ್ಳಲು ಬಂದಿದ್ದರು. ಎಟಿಎಂನಿಂದ ಹಣ ಬಾರದಿದ್ದರು ಅಕೌಂಟ್‌ನಲ್ಲಿ ಹಣ ಕಡಿತವಾಗಿತ್ತು. ಈ ಸಂಬಂಧ ಕೆನರಾ ಬ್ಯಾಂಕ್‌ಗೆ ಮೂರು ಪ್ರತ್ಯೇಕ ದೂರು ದಾಖಲಾಗಿತ್ತು. ಈ ಹಿನ್ನೆಲೆ ಎಟಿಎಂ ಕೇಂದ್ರದಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ವಂಚಕನ ಕೃತ್ಯ ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಏನಿತ್ತು?
ಮೇ 13ರ ರಾತ್ರಿ ವಿನೋಬನಗರದ 100 ಅಡಿ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂನೊಳಗೆ ಬಂದ ಅಪರಿಚಿತನೊಬ್ಬ ಹಣ ಹೊರ ಬರುವ ಜಾಗದಲ್ಲಿ ಗಮ್ ಟೇಪ್ ಮಾದರಿ ವಸ್ತು ಅಂಟಿಸಿ ಹೋಗಿದ್ದ. ನಂತರ ಬಂದ ಗ್ರಾಹಕರೊಬ್ಬರು ಎಟಿಎಂನಿಂದ 6 ಸಾವಿರ ರೂ. ಹಣ ಬಿಡಿಸಿಕೊಳ್ಳಲು ಯತ್ನಿಸಿದ್ದು, ಹಣ ಎಟಿಎಂನಿಂದ ಹೊರಬಂದಿರಲಿಲ್ಲ. ಹಾಗಾಗಿ ಗ್ರಾಹಕ ಬರಿಗೈಲಿ ಹಿಂತಿರುಗಿದ್ದರು. ಕೂಡಲೆ ಒಳ ಬಂದ ಅಪರಿಚಿತ ಗಮ್ ಟೇಪ್ ತೆಗೆದು, ಹಣ ತೆಗೆದುಕೊಂಡು ಹೋಗಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
ಸ್ವಲ್ಪ ಹೊತ್ತಿಗೆ ಮತ್ತಿಬ್ಬರು ಗ್ರಾಹಕರು ಬಂದಿದ್ದು ಅವರಿಗು ಕೂಡ ಹಣ ಬಂದಿರಲಿಲ್ಲ. ಅವರು ಎಟಿಎಂನಿಂದ ಹೊರ ಹೋಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ಒಳಗೆ ಬಂದು, ಗಮ್ ಟೇಪ್ ತೆಗೆದು ಹಣ ತೆಗೆದುಕೊಂಡು ಹೋಗಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟು 16,500 ರೂ. ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.
ಜೆಎನ್‌ಎನ್ ಕಾಲೇಜು ಬಳಿ ಕೃತ್ಯ
ಇನ್ನೊಂದೆಡೆ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಬಳಿ ಎಟಿಎಂ ಕೇಂದ್ರದಲ್ಲಿಯು ಇದೇ ರೀತಿ ಕೃತ್ಯ ನಡೆದಿದೆ. ಹಣ ಡ್ರಾ ಆಗುವ ಸ್ಥಳದಲ್ಲಿ ಅಪರಿಚಿತನೊಬ್ಬ ಗಮ್ ಟೇಪ್ ಅಂಟಿಸಿದ್ದ. ಬಳಿಕ ಅದನ್ನು ಬ್ಲೇಡ್‌ನಿಂದ ಕಟ್ ಮಾಡಿ ತೆಗೆದಿದ್ದಾನೆ. ಹಾಗಾಗಿ ಎಟಿಎಂ ಮೆಷಿನ್‌ಗೆ ತರಚಿದಂತಾಗಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ ಸಿಬ್ಬಂದಿ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಸೊರಬದಲ್ಲಿ ತಟ್ಟೆ ಬ್ಯಾಂಕ್ ಆರಂಭ, ಇವತ್ತು ತೀರ್ಥಹಳ್ಳಿಯಲ್ಲಿ ಉದ್ಘಾಟನೆ, ಏನಿದು ತಟ್ಟೆ ಬ್ಯಾಂಕ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200