ನಡು ಬೀದಿಯಲ್ಲಿ ಕೊಲೆ, ಸಿಸಿಟಿವಿ ವಿಡಿಯೋ ವೈರಲ್, ಯಾರಿದು ಹಂದಿ ಅಣ್ಣಿ? ಹೇಗಾಯ್ತು ಹತ್ಯೆ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | SHIMOGA | 14 ಜುಲೈ 2022

ಹಾಡ ಹಗಲೆ, ನಗರದ ಪ್ರಮುಖ ಸರ್ಕಲ್’ನಲ್ಲಿ ರೌಡಿ ಶೀಟರ್ (ROWDY SHEETER) ಹಂದಿ ಅಣ್ಣಿ ಹತ್ಯೆಯಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಣ್ಣಿಯನ್ನು ಕೆಲವೆ ಕ್ಷಣಗಳಲ್ಲಿ ಕೊಚ್ಚಿ ಪರಾರಿಯಾಗಿದ್ದಾರೆ. ಈಗ ಕೊಲೆಗಾರರ (MURDER) ಪತ್ತೆ ಕಾರ್ಯ ನಡೆಯುತ್ತಿದೆ.

Shimoga Nanjappa Hospital

ಕೊಲೆಗೂ ಮೊದಲು ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿಯನ್ನು ಸ್ವಲ್ಪ ದೂರದವರೆಗೂ ಅಟ್ಟಾಡಿಸಿಕೊಂಡು ಬರಲಾಗಿತ್ತು. ಇದರ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗಿದೆ.

ಬೆಳಗ್ಗೆ 10.50ಕ್ಕೆ ಹರಿಯಿತು ನೆತ್ತರು

ಹಂದಿ ಅಣ್ಣಿ ತನ್ನ ಹೋಂಡಾ ಆಕ್ಟೀವಾ ಬೈಕ್’ನಲ್ಲಿ ಸೋಮಿನಕೊಪ್ಪ ರಸ್ತೆ ಕಡೆಯಿಂದ ತೆರಳುತ್ತಿದ್ದ. ಈ ಸಂದರ್ಭ ಹತ್ಯೆಕೋರರು ಇನ್ನೋವಾ ಕಾರಿನಲ್ಲಿ ಆತನನ್ನು ಹಿಂಬಾಲಿಸಿ ಬಂದಿದ್ದಾರೆ. ಲಕ್ಷ್ಮೀ ಟಾಕೀಸ್ ಕಡೆಗೆ ತೆರಳುವ ರಸ್ತೆಯಲ್ಲಿ ಪೊಲೀಸ್ ಚೌಕಿಯಿಂದ ಸ್ವಲ್ಪ ದೂರದವರೆಗೆ ಹಂದಿ ಅಣ್ಣಿ ತೆರಳಿದ್ದಾನೆ.

Shimoga Handi Anni Murder

ಅಟ್ಟಾಡಿಸಿಕೊಂಡು ಬಂದರು

ಹಂದಿ ಅಣ್ಣಿ ಮೇಲೆ ಏಕಾಏಕಿ ಗುಂಪೊಂದು ದಾಳಿ ನಡೆಸುತ್ತದೆ. ‘ಆರರಿಂದ ಏಳು ಜನರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹಂದಿ ಅಣ್ಣಿಯನ್ನು ಓಡಿಸಿಕೊಂಡು ಬರುತ್ತಾರೆ. ಪೊಲೀಸ್ ಚೌಕಿ ಬಳಿ ಆತನ ಮೇಲೆ ದಾಳಿ ನಡೆಸಿ, ಹತ್ಯೆ ಮಾಡುತ್ತಾರೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಕೆಲವೇ ಸೆಕೆಂಡ್’ನಲ್ಲಿ ಹತ್ಯೆ

ಲಾಂಗು ಮಚ್ಚುಗಳಿಂದ ಹಂದಿ ಅಣ್ಣಿಯನ್ನು ಹತ್ಯೆ ಮಾಡಲಾಗಿದೆ. ಕೆಲವೇ ಸೆಕೆಂಡ್’ನಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಂದಿ ಅಣ್ಣಿ ಸಾವನ್ನಪ್ಪಿರುವುದು ಖಾತ್ರಿಯಾಗುತ್ತಿದ್ದ ಹಾಗೆ ಕೊಲೆಗಾರರು ಸ್ಥಳದಿಂದ ಪಾರಾರಿಯಾಗುತ್ತಾರೆ. ಆದರೆ ಒಬ್ಬಾತ ಮಾತ್ರ ಮರಳಿ ಬಂದು ಹಂದಿ ಅಣ್ಣಿ ತಲೆಗೆ ಲಾಂಗ್ ಬೀಸಿ ಓಡಿದ್ದಾನೆ. ಹತ್ಯೆ ಮಾಡಿದವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಅಲ್ಲದೆ ಹತ್ಯೆ ಮಾಡಿ ಇನ್ನೋವಾ ಕಾರಿನಲ್ಲೆ ಪಾರಿಯಾಗಿದ್ದಾರೆ.

Handi Anni Murder

ಅವಕ್ಕಾಗಿ ನಿಂತ ಜನರು

ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಕಂಡು, ನೆರೆದಿದ್ದ ಜನರು ಅವಕ್ಕಾಗಿದ್ದಾರೆ. ಕೆಲವು ನಿಮಿಷ ಮೃತದೇಹದ ಬಳಿಗೆ ತೆರಳಲು ಜನರು ಹೆದರಿದ್ದಾರೆ. ಕೂಡಲೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ವಿಚಾರ ತಿಳಿದು ಹಂದಿ ಅಣ್ಣಿ ಕುಟುಂಬದವರು ದುಃಖ ತೋಡಿಕೊಂಡರು. ಇದರಿಂದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಕೆಲವು ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸಿಸಿಟಿವಿ ದೃಶ್ಯ ವೈರಲ್

ಹಂದಿ ಅಣ್ಣಿ ಹತ್ಯೆ ವಿಚಾರ ತಿಳಿಯುತ್ತಿದ್ದ ಹಾಗೆ ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸ್ ಚೌಕಿಯಲ್ಲಿ ಸರ್ಕಲ್’ನಲ್ಲಿ ಇರುವ ವಿವಿಧ ಕಟ್ಟಡಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರು. ಈ ನಡುವೆ ಒಂದು ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಅದರಲ್ಲಿ ಹಂದಿ ಅಣ್ಣಿಯನ್ನು ಓಡಿಸಿಕೊಂಡು ಬರುವ ದೃಶ್ಯ ಸೆರೆಯಾಗಿದೆ.

Handi Anni Murder

ಯಾರಿದು ಹಂದಿ ಅಣ್ಣಿ?

ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಶಿವಮೊಗ್ಗದ ರೌಡಿ ಶೀಟರ್. 2016ರವರೆಗೆ ವಿವಿಧ ರೌಡಿ ಚಟುವಟಿಕೆಯಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಆ ಬಳಿಕ ಹಂದಿ ಅಣ್ಣಿ ವೈನ್ ಶಾಪ್ ನಡೆಸಿಕೊಂಡು, ಕಟ್ಟಡವೊಂದನ್ನು ಬಾಡಿಗೆಗೆ ಕೊಟ್ಟುಕೊಂಡು ಜೀವನ ನಡೆಸುತ್ತದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಹಂದಿ ಅಣ್ಣಿ ವಿರುದ್ಧ 9 ಪ್ರಕರಣಗಳಿದ್ದವು. ಈ ಪೈಕಿ ಲವ ಕುಶ ಹತ್ಯೆ ಪ್ರಕರಣ, ನವುಲೆ ಮೋಹನ್ ಹತ್ಯೆ ಪ್ರಕರಣ ಸೇರಿ ಒಟ್ಟು ಮೂರು ಹತ್ಯೆ ಪ್ರಕರಣಗಳಿವೆ. ಡಕಾಯಿತಿ, ರಾಬರಿ, ಹಲ್ಲೆ ಪ್ರಕರಣಗಳಿದ್ದವು. 2016ರಿಂದ ಈಚೆಗೆ ಈತನ ವಿರುದ್ಧ  ಯಾವುದೆ ಪ್ರಕರಣ ದಾಖಲಾಗಿರಲಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ನೀಡಿದ್ದ ಪೊಲೀಸರು

ಹಂದಿ ಅಣ್ಣಿ ಮೇಲೆ ದಾಳಿಯ ಕುರಿತು ಪೊಲೀಸರು ಈ ಮೊದಲೆ ಮುನ್ನೆಚ್ಚರಿಕೆ ನೀಡಿದ್ದರು. ‘ನಾವು ಆತನ ಚಟುವಟಿಕೆ ಮೇಲೆ ನಿಗಾ ವಹಿಸಿದ್ದೆವು. ಆತನ ಪ್ರಕರಣಗಳ ಕುರಿತು ಪಟ್ಟಿ ಸಿದ್ಧಪಡಿಸಿಕೊಂಡು, ಯಾವೆಲ್ಲ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ, ಯಾವುದು ಖುಲಾಸೆಯಾಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದೆವು. ಅಲ್ಲದೆ ಆತನ ಮೇಲೆ ದಾಳಿ ಆಗುವ ಸಂಭವ ಕುರಿತು ಮುನ್ನೆಚ್ಚರಿಕೆಯನ್ನು ನೀಡಿದ್ದವು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷೀಪ್ರಸಾದ್ ತಿಳಿಸಿದ್ದಾರೆ.

ಸದ್ಯ ಹಂದಿ ಅಣ್ಣಿ ಹತ್ಯೆ ಪ್ರಕರಣ ಸಂಬಂಧ ತನಿಖೆ ಮತ್ತು ಆರೋಪಿಗಳ ಪತ್ತೆಗೆ ನಾಲ್ವರು ಇನ್ಸ್ ಪೆಕ್ಟರ್’ಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY, CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಜುಲೈ 14, 2022

Leave a Comment