SHIVAMOGGA LIVE NEWS | 13 MAY 2024
SHIMOGA : ಆಟೋಗೆ ಕ್ಯಾಂಟರ್ ಹಿಟ್ ಅಂಡ್ ರನ್ ಮಾಡಿದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಆಕೆಯ ತಾಯಿ ಮತ್ತು ಅಜ್ಜಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ತ್ಯಾವರೆಚಟ್ನಹಳ್ಳಿ ಬಳಿ ಘಟನೆ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆ ಅಜ್ಜಂಪುರದ ಗಾನವಿ (17) ಮೃತ ವಿದ್ಯಾರ್ಥಿನಿ. ಈಕೆ ಪೇಸ್ ಕಾಲೇಜಿನಲ್ಲಿ ಓದುತ್ತಿದ್ದಳು. ಕಾಲೇಜಿಗೆ ರಜೆ ಇದ್ದಿದ್ದರಿಂದ ತಾಯಿ ಮತ್ತು ಅಜ್ಜಿ ಜೊತೆಗೆ ಸಂಬಂಧಿಯೊಬ್ಬರ ಮನೆ ಕಾರ್ಯಕ್ರಮಕ್ಕೆ ತೆರಳಿದ್ದಳು. ಅಲ್ಲಿಂದ ಕಾಲೇಜಿಗೆ ಮರಳುವಾಗ ಪೇಸ್ ಕಾಲೇಜು ಮುಂಭಾಗ ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಗುದ್ದಿದ ಕ್ಯಾಂಟರ್ ಸ್ಥಳದಿಂದ ಪರಾರಿಯಾಗಿದೆ. ಇನ್ನು, ಕ್ಯಾಂಟರ್ ಗುದ್ದಿದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು ಗಾನವಿಗೆ ಗಂಭೀರ ಗಾಯವಾಗಿದೆ. ಆಕೆಯ ತಾಯಿ ಮತ್ತು ಅಜ್ಜಿ ಕೂಡ ಗಾಯಗೊಂಡಿದ್ದರು. ಕೂಡಲೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಈ ಹೊತ್ತಿಗಾಗಲೆ ಗಾನವಿ ಕೊನೆಯುಸಿರೆಳೆದಿದ್ದಳು. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಶಿವಮೊಗ್ಗ ಸಮೀಪ ಆರೋಪಿಗೆ ಗುಂಡು ಹೊಡೆದ ಪೊಲೀಸರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200