ಶಿವಮೊಗ್ಗದಲ್ಲಿ ನೈಟ್‌ ಡ್ಯೂಟಿಗೆ ತೆರಳುತ್ತಿದ್ದ ಹೋಂ ಗಾರ್ಡ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ

SHIVAMOGGA LIVE NEWS | 17 JULY 2024

SHIMOGA : ರಾತ್ರಿ ಪಾಳಿಗೆ ತೆರಳುತ್ತಿದ್ದ ಹೋಂ ಗಾರ್ಡ್‌ (HOME GUARD) ಮೇಲೆ ಅಪರಿಚಿತರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಶಿವಮೊಗ್ಗದ ಎನ್‌.ಟಿ.ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಘಟನೆ ಸಂಭವಿಸಿದೆ.

ಹೋಂ ಗಾರ್ಡ್‌ ಶ್ರೀಧರ್‌ ಮೂರ್ತಿ ಗಾಯಗೊಂಡಿದ್ದು, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶ್ರೀಧರ್‌ ಮೂರ್ತಿ ಅವರು ತುಂಗಾ ನಗರ ಠಾಣೆಯಲ್ಲಿ ಹೋಂ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತಿ ಪಾಳಿಗೆ ತೆರಳುತ್ತಿದ್ದಾಗ ಘಟೆನೆ ಸಂಭವಿಸಿದೆ. ಬೈಕ್‌ಗೆ ಪೆಟ್ರೋಲ್‌ ಭರ್ತಿ ಮಾಡಿಸಕೊಳ್ಳಲು ಬಂಕ್‌ಗೆ ತೆರಳುತ್ತಿದ್ದರು.

Doddapete police station in shimoga

ಈ ವೇಳೆ 8 ರಿಂದ 10 ಮಂದಿ ಅಪರಿಚಿತರು ಶ್ರೀಧರ್‌ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇓

ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ, ರಸ್ತೆ, ತೋಟ, ಗದ್ದೆ ಜಲಾವೃತ, ಎಲ್ಲೆಲ್ಲಿ ಏನೇನಾಗಿದೆ? ಕಂಪ್ಲೀಟ್‌ ನ್ಯೂಸ್‌

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : July 17, 2024 at 8:04 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜುಲೈ 17, 2024

Leave a Comment