ಊರಿಗೆ ಹೋಗಿದ್ದಾಗ ಪಕ್ಕದ ಮನೆ ಮಹಿಳೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

ಶಿವಮೊಗ್ಗ: ಕುಟುಂಬದವರು ಊರಿಗೆ ಹೋಗಿದ್ದಾಗ ಮನೆ ಬಾಗಿಲಿನ ಲಾಕ್‌ ಮೀಟಿ ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಡಿ ಬ್ಲಾಕ್‌ನಲ್ಲಿರುವ ದಿನೇಶ್‌ ಕುಮಾರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ದಿನೇಶ್‌ ಕುಮಾರ್‌ ಮತ್ತು ಅವರ ಪೋಷಕರು ಸಾಗರದ ತಮ್ಮೂರಿಗೆ ತೆರಳಿದ್ದರು. ಪಕ್ಕದ ಮನೆಯ ಮಹಿಳೆ ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೆ ದಿನೇಶ್‌ ಕುಮಾರ್‌ ಮನೆಗೆ ಮರಳಿದ್ದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನ ಆಗಿರುವುದು ಗೊತ್ತಾಗಿದೆ.

ಇದನ್ನೂ ಓದಿ » ಬಿಹಾರ ಫಲಿತಾಂಶ, ಶಿವಮೊಗ್ಗದಲ್ಲಿ ಯಡಿಯೂರಪ್ಪ, ರಾಘವೇಂದ್ರ ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಬಾಗಿಲಿನ ಲಾಕ್‌ ಮುರಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಲಕ್ಷ್ಮಿ ಕಾಸು, ಉಂಗುರಗಳು ಸೇರಿದ ₹45,000 ಮೌಲ್ಯದ ಆಭರಣಗಳು, ₹45,000 ನಗದು, ₹1200 ಮೌಲ್ಯದ ಬೆಳ್ಳಿ ಉಡುದಾರವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Leave a Comment