ಬೆಳಗಿನ ಜಾವ ಎದುರು ಮನೆಯವರು ಕರೆ ಮಾಡಿದಾಗ ಮನೆ ಮಾಲೀಕನಿಗೆ ಶಾಕ್

SHIVAMOGGA LIVE NEWS | 31 MARCH 2023

SHIMOGA : ಸಂಬಂಧಿಯೊಬ್ಬರ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಗಂಧರ್ವ ನಗರದ ಮನೆಯೊಂದರಲ್ಲಿ ಕಳ್ಳತನವಾಗಿದೆ (theft). ಬಾಗಿಲಿನ ಇಂಟರ್ ಲಾಕ್ ಮುರಿದು ಒಳ ನುಗ್ಗಿರುವ ಕಳ್ಳರು ನಗದು ಕಳ್ಳತನ ಮಾಡಿದ್ದಾರೆ. (ಈ ಸುದ್ದಿಯನ್ನು ಇನ್ನು 51 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Crime-News-General-Image

ಗಂಧರ್ವ ನಗರದ ರೂಪೇಶ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (theft). ದಾವಣಗೆರೆಯಲ್ಲಿ ಮಾವನ ಮನೆಯಲ್ಲಿ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ರೂಪೇಶ್ ಕುಮಾರ್ ಅವರು ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಳ್ಳನತವಾಗಿದೆ. ಮನೆಯ ಬೀರುವಿನಲ್ಲಿದ್ದ 5 ಸಾವಿರ ರೂ. ನಗದು ಕಳ್ಳತನವಾಗಿದೆ. ಅಲ್ಲದೆ ಮನೆಯಲ್ಲಿದ್ದ ಬೈಕಿನ ಕೀ ತೆಗೆದುಕೊಂಡು, ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಡಿಸ್ಕವರ್ ಬೈಕನ್ನು ಕಳ್ಳರ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ – ಮಲವಗೊಪ್ಪದಲ್ಲಿ ಹೆದ್ದಾರಿ ಮೇಲೆ ಟೈರ್ ಗೆ ಬೆಂಕಿ, ಗಾಡಿಕೊಪ್ಪದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಮಾ.29ರಂದು ಬೆಳಗಿನ ಜಾವ ಎದುರು ಮನೆಯವರ ಕರೆ ಮಾಡಿದಾಗಿ ಕಳ್ಳತನದ ವಿಚಾರ ಗೊತ್ತಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image

Leave a Comment