ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 6 DECEMBER 2024
ಶಿವಮೊಗ್ಗ : ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿದ್ದ ಪಾರ್ಟ್ ಟೈಮ್ ಜಾಬ್ ಜಾಹೀರಾತು (POST) ನಂಬಿ ಗೃಹಿಣಿಯೊಬ್ಬರು 8.20 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಜಾಹೀರಾತಿನಲ್ಲಿದ್ದ ನಂಬರ್‌ಗೆ ವಾಟ್ಸಪ್ ಮಾಡಿದಾಗ, ತಾವು ಕಳುಹಿಸುವ ವಿಡಿಯೋಗಳಿಗೆ ಲೈಕ್ ಮಾಡಿ, ಸ್ಕ್ರೀನ್ ಶಾಟ್ ಕಳುಹಿಸುವಂತೆ ಸೂಚಿಸಲಾಗಿತ್ತು. ಇದೇ ಬಗೆಯ ಎಂಟು ಟಾಸ್ಕ್ ಪೂರೈಸಿದಾಗ ಗೃಹಿಣಿಯ ಖಾತೆಗೆ 150 ರೂ. ಹಣ ವರ್ಗಾಯಿಸಲಾಗಿತ್ತು. ನಂತರ ಹಣ ಪಾವತಿಸಿ ಟಾಸ್ಕ್ ಪೂರೈಸುವಂತೆ ಸೂಚಿಸಲಾಗಿತ್ತು.
ಹೆಚ್ಚುವರಿ ಲಾಭದ ಆಸೆಯಲ್ಲಿ ಗೃಹಿಣಿ ಹಂತ ಹಂತವಾಗಿ ಒಟ್ಟು 8.20 ಲಕ್ಷ ರೂ. ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ್ದರು. ಕೊನೆಗೆ ಕಮಿಷನ್ನೂ ನೀಡದೆ, ಹೂಡಿಕೆ ಮಾಡಿದ್ದ ಹಣವನ್ನೂ ಹಿಂತಿರುಗಿಸದೆ ಇದ್ದಾಗ ಅನುಮಾನಗೊಂಡು ಗೃಹಿಣಿ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಬಸವಕೇಂದ್ರ ಸ್ವಾಮೀಜಿಗೆ ಚಿನ್ಮಯಾನುಗ್ರಹ ದೀಕ್ಷೆ, ಯಾರೆಲ್ಲ ಭಾಗವಹಿಸಿದ್ದರು? ಏನೆಲ್ಲ ಮಾತನಾಡಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422