ಶಿವಮೊಗ್ಗ ಲೈವ್
ಶಿವಮೊಗ್ಗ: ಖಬರಸ್ತಾನ್ನ ಶೆಡ್ ಬಾಗಿಲಿನ ಬೀಗ ಮುರಿದು ಕಬ್ಬಿಣದ ವಸ್ತುಗಳು ಹಾಗೂ ಎಲೆಕ್ಟ್ರಿಕ್ ವೈರ್ ಕಳ್ಳತನ ಮಾಡಲಾಗಿದೆ. ನಗರದ ಸೂಳೆಬೈಲು ಎಪಿಜೆ ಅಬ್ದುಲ್ ಕಲಾಂ ಲೇಔಟ್ನ ಖಬರಸ್ತಾನ್ನಲ್ಲಿ ಘಟನೆ ನಡೆದಿದೆ.
ಶೆಡ್ನಲ್ಲಿ ಕಬ್ಬಿಣದ ವಸ್ತುಗಳು ಹಾಗೂ ಇತರ ಸಾಮಗ್ರಿಗಳನ್ನು ಇರಿಸಲಾಗಿತ್ತು. ಕಳ್ಳರು ಶೆಡ್ನ ಬಾಗಿಲಿನ ಬೀಗವನ್ನು ಆಯುಧದಿಂದ ಮೀಟಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಶೆಡ್ನ ಒಳಗೆ ಇಟ್ಟಿದ್ದ ಸುಮಾರು ₹5,000 ಮೌಲ್ಯದ 50 ಮೀಟರ್ ಎಲೆಕ್ಟ್ರಿಕ್ ವೈರ್ ಹಾಗೂ ₹50,000 ಮೌಲ್ಯದ 2 ಟನ್ ತೂಕದ ಕಬ್ಬಿಣದ ಸಾಮಗ್ರಿ ಕಳ್ಳತನವಾಗಿದೆ. ಒಟ್ಟು ₹55,000 ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
