CRIME NEWS | ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆ ಕಿಡ್ನಾಪ್, ಸುಲಿಗೆ ಕೇಸ್, ಮೂವರಿಗೆ ಶಿಕ್ಷೆ ಪ್ರಕಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019

ಮಹಿಳೆಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗ ಕೋರ್ಟ್ ಶಿಕ್ಷೆ ವಿಧಿಸಿದೆ. ಮೂವರು ಆರೋಪಿಗಳು ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದ್ದರು.

ಏನಿದು ಘಟನೆ?

ಬಾಳೆಕೊಪ್ಪದ ಸಹನಾ ಎಂಬುವವರನ್ನು ಶಿವಮೊಗ್ಗದ ಬಸ್ ನಿಲ್ದಾಣದಿಂದ ಅಪಹರಣ ಮಾಡಲಾಗಿತ್ತು. ಅನುಪಿನಕಟ್ಟೆ ಬಳಿ ಕೆರೆ ಅಂಗಳದಲ್ಲಿ ಸಹನಾ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು, ಎಟಿಎಂನಿಂದ 9500 ರೂ. ಹಣ ಡ್ರಾ ಮಾಡಿಸಿಕೊಂಡ ದುಷ್ಕರ್ಮಿಗಳು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದರು. 2018ರ ಜೂನ್ 6ರಂದು ಘಟನೆ ನಡೆದಿತ್ತು.

ಸಿಕ್ಕಿಬಿದ್ದರು ಮೂವರು

ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಠಾಣೆ ಪೊಲೀಸರು, ವಿಶೇಷ ತಂಡ ರಚಿಸಿಕೊಂಡರು. ಸಿಪಿಐ ಹರೀಶ್ ಪಟೇಲ್, ಸಿಬ್ಬಂದಿಗಳಾದ ವಿಜಯ್, ಶೇಖರ್, ಕಿರಣ್ ಮೋರೆ, ಪ್ರವೀಣ್, ಸುರೇಶ್ ಮತ್ತು ಉಮೇಶ್ ಕಾರ್ಯಾಚರಣೆ ನಡೆಸಿ ಮೂವರನ್ನು ಅರೆಸ್ಟ್ ಮಾಡಿದ್ದರು. ಬಂಧಿತರನ್ನು ಪದ್ಮಾ ಟಾಕೀಸ್ ಬಳಿಯ ಮುಬಾರಕ್ ಖಾನ್ (21), ತುಂಗಾನಗರದ ಸಮೀರ್ (28) ಮತ್ತು ಟಿಪ್ಪುನಗರದ ನಯಾಜ್ (22) ಎಂದು ಗುರುತಿಸಲಾಗಿತ್ತು.

74673205 977523539275733 2591849541493850112 n.jpg? nc cat=104& nc oc=AQkDjIMGojjQNS 5Xwmyf smKkq3L6Niwh3RwyJxoJZn19Mb2Xr8L9FDRkadINXn b4& nc ht=scontent.fblr11 1

ಆರೋಪಿಗಳಿಗೆ ತಕ್ಕ ಶಾಸ್ತಿ

ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯ ಇವತ್ತು ತೀರ್ಪು ಪ್ರಕಟಿಸಿದೆ. ಮೂವರಿಗು ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment