ಶಿವಮೊಗ್ಗ KSRTC ನಿಲ್ದಾಣದಲ್ಲಿ ಭದ್ರಾವತಿ ಮಹಿಳೆಯ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ

ಶಿವಮೊಗ್ಗ: ನಗರದ KSRTC ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಈವರೆಗು ಒಂದೊಂದೆ ಚೈನ್‌ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಭಾರಿ ಮೊತ್ತದ ಚಿನ್ನಾಭರಣ ಕಳವು ಮಾಡಿದ್ದಾರೆ.

ಹೇಗಾಯ್ತು ಕಳ್ಳತನ?

Shimoga-KSRTC-Bus-Stand.

ಬಸ್ ಹತ್ತುವ ಭರಾಟೆಯಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್ ಕಳ್ಳತನ ಮಾಡಲಾಗಿದೆ. ಪರ್ಸ್‌ನಲ್ಲಿದ್ದ ಸುಮಾರು 179 ಗ್ರಾಂ ಚಿನ್ನಾಭರಣ ಹಾಗೂ ₹35,000 ನಗದು ಸೇರಿ ಒಟ್ಟು ₹8,57,047 ಮೌಲ್ಯದ ವಸ್ತುಗಳು ಕಳುವಾಗಿದೆ. ಈ ಸಂಬಂಧ ಭದ್ರಾವತಿ ತಾಲೂಕು ಆನವೇರಿಯ ವಾಸಂತಿ ಎಂಬುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

Kalleshwara-Enterprises.webp

ಏಪ್ರಿಲ್‌ 4ರಂದು ವಾಸಂತಿ ಅವರು ಮಗಳೊಂದಿಗೆ ಶಿವಮೊಗ್ಗದಿಂದ ಸಾಗರಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಾಗರಕ್ಕೆ ತೆರಳುವ ಬಸ್‌ ಹತ್ತುವ ವೇಳೆ ವಿಪರೀತ ಜನದಟ್ಟಣೆ ಇತ್ತು. ಈ ವೇಳೆ ಅವರ ಹೆಗಲಿಗಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸಣ್ಣ ಪರ್ಸ್‌ ಕಳ್ಳತನವಾಗಿದೆ.

Shimoga-KSRTC-Bus-Stand.

ಬಸ್ ಹತ್ತಿದ ಬಳಿಕ ಕಂಡಕ್ಟರ್ ಬಳಿ ಟಿಕೆಟ್ ಪಡೆಯಲು ಹೋದಾಗ ಕಳ್ಳತನವಾಗಿರುವುದು ವಾಸಂತಿ ಅವರ ಗಮನಕ್ಕೆ ಬಂದಿದೆ. ಕೂಡಲೇ ಬಸ್‌ನಲ್ಲಿ ಹುಡುಕಾಡಿದರೂ ಪರ್ಸ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಧಗಧಗ ಹೊತ್ತಿ ಉರಿದ ಡಸ್ಟರ್‌ ಕಾರು, ತಪ್ಪಿದ ಅನಾಹುತ, ಆಗಿದ್ದೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment