ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ಶಿವಮೊಗ್ಗ: ಗಾಜನೂರು ಬಳಿಯ ತುಂತುರು ರೆಸಾರ್ಟ್‌ನಲ್ಲಿ (Resort) ವಿದ್ಯುತ್ ಶಾಕ್‌ಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಬ್ಬಲಗೆರೆ ಗ್ರಾಮದ ನಿವಾಸಿ ನಾಗಮ್ಮ (45) ಮೃತ ದುರ್ದೈವಿ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮದ ಕ್ಯಾಟರಿಂಗ್ ಕೆಲಸಕ್ಕೆ ನಾಗಮ್ಮ ತೆರಳಿದ್ದರು. ರೆಸಾರ್ಟ್ ಅಲಂಕಾರಕ್ಕಾಗಿ ಅಳವಡಿಸಲಾಗಿದ್ದ ಲೈಟಿಂಗ್‌ನಿಂದಾಗಿ ಬೇಲಿಗೆ ವಿದ್ಯುತ್ ಪ್ರವಹಿಸಿತ್ತು ಎನ್ನಲಾಗಿದೆ. ಈ ಬೇಲಿಯನ್ನು ಮುಟ್ಟಿದ ತಕ್ಷಣ ವಿದ್ಯುತ್ ಪ್ರವಹಿಸಿ ನಾಗಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

Shimoga-Tunturu-Resort-incident

ಇದನ್ನೂ ಓದಿ : ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಆ ವೇಳೆಗಾಗಲೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ನಾಗಮ್ಮ ಅವರು ಅಬ್ಬಲಗೆರೆ ಗ್ರಾಮದ ನಾಗರಾಜ್ ಎಂಬುವರ ಪತ್ನಿ. ಚಂದ್ರು ಎಂಬುವರ ಮಾಲೀಕತ್ವದ ಎಸ್.ಪಿ.ಎಸ್ ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು.

Shimoga-Tunturu-Resort-incident

ತಪ್ಪಿದ ಭಾರಿ ದುರಂತ

ಮೂಲಗಳ ಮಾಹಿತಿ ಪ್ರಕಾರ, ವೇದಿಕೆಯ ಅಲಂಕಾರಕ್ಕೆ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಇದರ ಬ್ಯಾಲೆನ್ಸ್‌ಗಾಗಿ ವೇದಿಕೆಯಿಂದ ಬೇಲಿಗೆ ತಂತಿ ಮೂಲಕ ಕಟ್ಟಲಾಗಿತ್ತು. ವೇದಿಕೆಯಲ್ಲಿ ಅಳವಡಿಸಿದ್ದ ಲೈಟಿಂಗ್‌ನಲ್ಲಿ ವಿದ್ಯುತ್‌ ಪ್ರವಹಿಸಿದ ವಿದ್ಯುತ್‌ ತಂತಿ ಬೇಲಿಗೆ ತಲುಪಿದೆ. ಇದರ ಅರಿವಿರದೆ ನಾಗಮ್ಮ ಅವರು ಅದೇ ತಂತಿ ಬೇಲಿ ಮೇಲೆ ಬಟ್ಟೆ ಒಣಗಿಸಿದ್ದಾರೆ. ಆಗ ವಿದ್ಯುತ್‌ ಶಾಕ್‌ಗೆ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

Shimoga-Tunturu-Resort-incident

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment