ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 2 JUNE 2024
SHIMOGA : ಉಂಗುರ, ಬೆಳ್ಳಿ ದೀಪ ಖರೀದಿಸುವಂತೆ ನಟಿಸಿ ಆಭರಣದ ಮಳಿಗೆಯೊಂದರಿಂದ 3.51 ಲಕ್ಷ ರೂ. ಮೌಲ್ಯದ ಚಿನ್ನಾಭರಣ (JEWELS) ಕಳವು ಮಾಡಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ಮುಖ್ಯ ರಸ್ತೆಯ ಸಂಪತ್ ಜ್ಯೂವೆಲರ್ಸ್‌ನಲ್ಲಿ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಡುಗೊರೆ ನೀಡಲು ಉಂಗುರ ವಿಚಾರಿಸಿದರು
ಉಡುಗೊರೆ ನೀಡಲು ಚಿನ್ನದ ಉಂಗುರು ಮತ್ತು ಬೆಳ್ಳಿ ದೀಪ ವಿಚಾರಿಸಿಕೊಂಡು ಓರ್ವ ಪುರುಷ, ಮೂವರು ಮಹಿಳೆಯರು ಬಂದಿದ್ದರು. ಕಡಿಮೆ ದರದ ಉಂಗುರ ತೋರಿಸುವಂತೆ ತಿಳಿಸಿದ್ದರಿಂದ ಅಂಗಡಿ ಓನರ್ ಹರ್ಷಬಿ ಸ್ಟೋರ್ ರೂಂಗೆ ತೆರಳಿದ್ದರು. ಅಂಗಡಿಯ ಕೆಲಸದ ಹುಡುಗಿ ಬೆಳ್ಳಿ ದೀಪಗಳನ್ನು ತೋರಿಸುತ್ತಿದ್ದರು. ಈ ಸಂದರ್ಭ ಹಿಂದೆ ನಿಂತಿದ್ದ ಮಹಿಳೆ ಡಿಸ್‌ಪ್ಲೇ ಡ್ರಾದಲ್ಲಿದ್ದ ಆಭರಣಗಳ ಪ್ಲಾಸ್ಟಿಕ್ ಬಾಕ್ಸ್ ತೆಗೆದುಕೊಂಡು ಬ್ಲೌಸ್‌ನೊಳಗೆ ಇಟ್ಟುಕೊಂಡಿದ್ದಾಳೆ.
ಗಡಿಬಿಡಿಯಲ್ಲಿ ತೆರಳಿದಾಗ ಅನುಮಾನ
ಬಂಗಾರದ ಉಂಗುರ, ಬೆಳ್ಳಿ ದೀಪಗಳ ಬಗ್ಗೆ ವಿಚಾರಿಸಿದ ನಾಲ್ವರು ಕೊನೆಗೆ ಏನನ್ನೂ ಖರೀದಿಸದೆ ಗಡಿಬಿಡಿಯಲ್ಲಿ ಹೊರ ನಡೆದಿದ್ದರು. ಅನುಮಾನಗೊಂಡ ಆಭರಣ ಮಳಿಗೆಯ ಓನರ್ ಹರ್ಷಬಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದರು. ಆಗ ಕಳ್ಳತನ ಗೊತ್ತಾಗಿದೆ. ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಮಾಂಟಿಕಾ, 10 ಲಕ್ಷ್ಮಿ ಕಾಸು, 9 ತಾಳಿ, 7 ಜೊತೆ ಬುಗಡಿ, ಮೂಗುಬೊಟ್ಟುಗಳು ಇದ್ದವು. ಒಟ್ಟು 3.51 ಲಕ್ಷ ರೂ. ಮೌಲ್ಯದ 67 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಮಾ ಜ್ಯೂವೆಲ್ಲರಿಯಲ್ಲಿ ಕಳ್ಳತನ
ಬಿ.ಹೆಚ್.ರಸ್ತೆಯಲ್ಲಿರುವ ಭೀಮಾ ಜ್ಯೂವೆಲ್ಲರಿಯಲ್ಲಿ ಶೋ ರೂಂನಲ್ಲಿ ಸ್ಟಾಕ್ ಚೆಕ್ ಮಾಡುವಾಗ ಮೂರು ಲಾಕೆಟ್ ಕಡಿಮೆಯಾಗಿರುವುದು ಗೊತ್ತಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಮಹಿಳೆಯರು ಅಂಗಡಿಗೆ ಬಂದು ಲಾಕೆಟ್ ಖರೀದಿಸುವಂತೆ ನಟಿಸಿ ಮೂರು ಲಾಕೆಟ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






