ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖದೀಮರ ಹಾವಳಿ ಮುಂದುವರೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ (Jewels), ನಗದು ಕಳ್ಳತನವಾಗಿದೆ ಎಂದು ಮಲ್ಲಿಗೇನಹಳ್ಳಿಯ ಬಂಗಾರಮ್ಮ ಎಂಬುವವರು ದೂರು ನೀಡಿದ್ದಾರೆ.
ಬಂಗಾರಮ್ಮ ಸೊರಬದ ತಮ್ಮೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಆಗಮಿಸಿದ್ದರು. ಆನವಟ್ಟಿಗೆ ತೆರಳುವ ಬಸ್ ಬಂದಿದ್ದು, ಸೀಟು ಹಿಡಿದು ಕುಳಿತಿದ್ದರು. ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆಯಲು ಮುಂದಾದಾಗ ಬ್ಯಾಗಿನ ಜಿಪ್ ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಅದರೊಳಗೆ ಇದ್ದ 25 ಗ್ರಾಂ ತೂಕದ ಒಂದು ಲಕ್ಷ ಮೌಲ್ಯದ ಕಾಸಿನ ಸರ, ₹2.29 ಲಕ್ಷ ಮೌಲ್ಯದ 36 ಗ್ರಾಂ ತೂಕದ ಮಾಂಗಲ್ಯ ಸರ, ₹2500 ನಗದು ನಾಪತ್ತೆಯಾಗಿತ್ತು.
ಬಸ್ ಹತ್ತುವಾಗ ರಶ್ ಇತ್ತು. ಈ ಸಂದರ್ಭ ಕಳ್ಳರು ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು ಚಿನ್ನಾಭರಣ, ನಗದು ಕದ್ದಿರುವ ಶಂಕೆ ಇದೆ ಎಂದು ಬಂಗಾರಮ್ಮ ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ತಾಪಮಾನ ಹೆಚ್ಚಳ, ಉಳಿದ ತಾಲೂಕುಗಳಲ್ಲಿ ಹೇಗಿರುತ್ತೆ ವಾತಾವರಣ? ಇಲ್ಲಿದೆ ಡಿಟೇಲ್ಸ್
Jewels





