ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ : ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಲ್ಯಾಬ್ನ (Lab) ಬಾಗಿಲಿನ ಬೀಗ ಒಡೆದು ಸಂಶೋಧನೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ » ವಿಧಾನಸೌಧದಲ್ಲಿ ಕುವೆಂಪು ವಿ.ವಿ ಕುರಿತು ಚರ್ಚೆ, ಡಾ. ಸರ್ಜಿ ಏನೆಲ್ಲ ವಿಷಯ ಪ್ರಸ್ತಾಪಿಸಿದರು?
ಮಾ.12ರಂದು ಬೆಳಗ್ಗೆ ಸಿಬ್ಬಂದಿ ಲ್ಯಾಬ್ ಬಾಗಿಲು ತೆರೆಯಲು ಬಂದಾಗಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಮತ್ತು ಎಸ್ಟೇಟ್ ಆಫೀಸರ್ಗೆ ಮಾಹಿತಿ ನೀಡಲಾಗಿದೆ.
50 ಸಾವಿರ ಮೌಲ್ಯದ ವಸ್ತುಗಳು ಕಳವು
ಲ್ಯಾಬ್ನಲ್ಲಿದ್ದ (Lab) ಸೆಕ್ಷನ್ ಪಂಪ್, ಹಾಟ್ ಪ್ಲೇಟ್, ಮ್ಯಾಗ್ನೇಟಿಕ್ ಸ್ಟಿರರ್, ಬ್ಯೂರೆಟ್ ಸ್ಟಾಂಡ್ ರಾಡ್, ಐರನ್ ರಾಡ್, ಟ್ರೈಪ್ಯಾಡ್ ಸ್ವಾನ್ ನೆಕ್ ಟ್ಯಾಪ್, ಪ್ಲಾಸ್ಟಿಕ್ ಸ್ಟೂಲುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ » BIG IMPACT – ಶಿವಮೊಗ್ಗ ಲೈವ್ ವರದಿ ಬೆನ್ನಿಗೆ ಗಾಂಧಿ ಪಾರ್ಕ್ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್
ಘಟನೆ ಸಂಬಂಧ ಕೆಮಿಸ್ಟ್ರಿ ಲ್ಯಾಬ್ನ ಉಸ್ತುವಾರಿ ಡಾ. ಪ್ರಭಾಕರ್ ಚೌಹಾಣ್ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್ ಆಕ್ರೋಶ, ಮನವಿಯಲ್ಲಿ ಏನೇನಿದೆ?







