ನಟ ದರ್ಶನ್‌ ಚಾಲಕ ಶಿವಮೊಗ್ಗ ಜೈಲಿಂದ ರಿಲೀಸ್‌, ಓಡೋಡಿ ಹೋಗಿ ಕಾರು ಹತ್ತಿದ ಆರೋಪಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 17 DECEMBER 2024

ಶಿವಮೊಗ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಶಿವಮೊಗ್ಗ ಜೈಲಿನಲ್ಲಿದ್ದ 12ನೇ ಆರೋಪಿ ಲಕ್ಷ್ಮಣ್‌ ಇವತ್ತು ಬಿಡುಗಡೆಯಾಗಿದ್ದಾನೆ (Released). ಮತ್ತೊಬ್ಬ ಆರೋಪಿಗೆ ಇವತ್ತೂ ಬಿಡುಗಡೆ ಭಾಗ್ಯವಿಲ್ಲವಾಗಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಓಡೋಡಿ ಹೋಗಿ ಕಾರು ಹತ್ತಿದ  ಲಕ್ಷ್ಮಣ್‌ 

ಜಾಮೀನು ದೊರೆತ ಹಿನ್ನೆಲೆ ನಟ ದರ್ಶನ್‌ ಕಾರು ಚಾಲಕ ಲಕ್ಷ್ಮಣ್‌ ಇವತ್ತು ಶಿವಮೊಗ್ಗ ಜೈಲನಿಂದ ಬಿಡುಗಡೆಯಾಗಿದ್ದಾನೆ. ಲಕ್ಷ್ಮಣ್‌ನನ್ನು ಕರೆದೊಯ್ಯಲು ಕಳನಟ ರಾಜಕುಮಾರ್‌ ಜೈಲು ಬಳಿ ಆಗಮಿಸಿದ್ದರು. ಜೈಲಿನ ಬಾಗಿಲಿನಿಂದ ಹೊರ ಬರುತ್ತಿದ್ದಂತೆ ಲಕ್ಷ್ಮಣ್‌ ಓಡೋಡಿ ಹೋಗಿ ಕಾರು ಹತ್ತಿ ಹೊರಟ.

Actor-Darshan-Car-Drivers-lakshman-released-from-Shimoga-Jail

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಲಕ್ಷ್ಮಣ್‌ 12ನೇ ಆರೋಪಿಯಾಗಿದ್ದ. ಹತ್ಯೆ ನಡೆದ ಸ್ಥಳದಲ್ಲಿ ಈತ ಇದ್ದ ಮತ್ತು ಮೃತದೇಹವನ್ನು ಎಸೆಯಲು ವ್ಯವಸ್ಥೆ ಮಾಡಿದ್ದ ಎಂಬ ಆರೋಪವಿದೆ.

Decathlon

ಜಗದೀಶ್‌ಗೆ ಬಿಡುಗಡೆ ಭಾಗ್ಯವಿಲ್ಲ

ಪ್ರಕರಣದ 6ನೇ ಆರೋಪಿ, ಚಿತ್ರದುರ್ಗದ ಆಟೋ ಚಾಲಕ ಜಗದೀಶ್‌ ಅಲಿಯಾಸ್‌ ಜಗ್ಗು ಕೂಡ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಆತನಿಗು ಜಾಮೀನು ಮಂಜೂರಾಗಿದೆ. ಆದರೆ ಶೂರಿಟಿ ಸಿಗದ ಹಿನ್ನೆಲೆ ಜಗದೀಶ್‌ ಇನ್ನೂ ಜೈಲಿನಲ್ಲೇ ಇದ್ದಾನೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ತಂಡದಲ್ಲಿ ಜಗದೀಶ್‌ ಕೂಡ ಇದ್ದ ಎಂಬ ಆರೋಪವಿದೆ.

ಪರಪ್ಪನ ಅಗ್ರಹಾರದಿಂದ  ಶಿವಮೊಗ್ಗಕ್ಕೆ 

Shimoga-Central-Jail-Front-General-Image

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಆರೋಪದ ನಂತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲಿಗೆ ವರ್ಗಾಯಿಸಲಾಯಿತು. ನಟ ದರ್ಶನ್‌ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಆ.29ರಂದು ಆರೋಪಿಗಳಾದ ಜಗದೀಶ್‌ ಮತ್ತು ಲಕ್ಷ್ಮಣ್‌ನನ್ನು ಶಿವಮೊಗ್ಗ ಜೈಲಿಗೆ ರವಾನಿಸಲಾಗಿತ್ತು.

ಇದನ್ನೂ ಓದಿ » ದಿಢೀರ್‌ ಕುಸಿದು ಬಿದ್ದ ಅತಿಥಿ ಉಪನ್ಯಾಸಕಿ, ತಕ್ಷಣ ನೆರವಾದ ಡಾ. ಸರ್ಜಿ, ಆಗಿದ್ದೇನು?

Leave a Comment