ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 JUNE 2024
SHIMOGA : ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ನ ಲಗೇಜ್ ಕ್ಯಾರಿಯರ್‌ನಲ್ಲಿ ಇಟ್ಟಿದ್ದ ಲ್ಯಾಪ್‌ಟಾಪ್ (Laptop) ಬ್ಯಾಗ್ ಕಳುವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಹೊಸನಗರದ ಸಿಂಧು ಎಂಬುವರು ರಜೆ ಮುಗಿಸಿ ಭಾನುವಾರ ರಾತ್ರಿ ತಮ್ಮ ಸಹೋದರಿ ಜೊತೆಗೆ ಬೆಂಗಳೂರಿಗೆ ತೆರಳಲು ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಲಗೇಜ್ ಇಡುವ ಜಾಗದಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಮತ್ತು ಇನ್ನೊಂದು ಬ್ಯಾಗ್ ಅನ್ನು ಇಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಬ್ಯಾಗಿನಲ್ಲಿದ್ದ ನೀರಿನ ಬಾಟಲಿ ತೆಗೆದುಕೊಳ್ಳಲು ಲಗೇಜ್ ಕ್ಯಾರಿಯರ್‌ನತ್ತ ನೋಡಿದಾಗ ಲ್ಯಾಪ್‌ಟಾಪ್ ಬ್ಯಾಗ್ ನಾಪತ್ತೆಯಾಗಿತ್ತು.

ಬ್ಯಾಗ್‌ನಲ್ಲಿ 50 ಸಾವಿರ ರೂ. ಮೌಲ್ಯದ ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್ ಇತ್ತು ಎಂದು ಆರೋಪಿಸಲಾಗಿದೆ. ಭಾನುವಾರ ಪ್ರಯಾಣಿಕರ ದಟ್ಟಣೆ ಹೆಚ್ಚು. ಇದೆ ಸಮಯದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಲ್ಯಾಪ್‌ಟಾಪ್ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಾಗರದ ಎಲ್.ಬಿ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ, ಜೀಬ್ರಾ ಕ್ರಾಸ್, ಹಂಪ್‌ಗಳಿಗೆ ಒತ್ತಾಯ
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





