ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 5 SEPTEMBER 2024 : KSRTC ಬಸ್ಸಿನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ ಬ್ಯಾಗ್ ಕಳ್ಳತನ ಮಾಡಲಾಗಿದೆ. ಅದರಲ್ಲಿ ಲ್ಯಾಪ್ ಟಾಪ್ ಸೇರಿ ವಿವಿಧ ವಸ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ತೀರ್ಥಹಳ್ಳಿ ತಾಲೂಕು ಕಮ್ಮರಡಿ ಮೂಲದ ಇಂಜಿನಿಯರ್ ಸುಹೈಬತ್ ಉಲ್ ಅಸ್ಲಾಮಿಯಾ ಎಂಬುವರು ಬೆಂಗಳೂರಿನಿಂದ ತಮ್ಮೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಚ್ಚರವಾದಾಗ ಬ್ಯಾಗ್ ನಾಪತ್ತೆ
ಸುಹೈಬತ್ ಉಲ್ ಅಸ್ಲಾಮಿಯಾ ಅವರು ಬೆಂಗಳೂರಿನಿಂದ ಶೃಂಗೇರಿಗೆ ತೆರಳುವ ಬಸ್ ಹತ್ತಿದ್ದರು. ಆ ಬಸ್ಸು ಬೆಳಗ್ಗೆ 5 ಗಂಟೆಗೆ ಶಿವಮೊಗ್ಗಕ್ಕೆ ಬಂದು ಶೃಂಗೇರಿ ಕಡೆಗೆ ತೆರಳುತ್ತಿತ್ತು. ತೀರ್ಥಹಳ್ಳಿ ತಾಲೂಕು ಹೆಗ್ಗೋಡು ಬಳಿ ಬಸ್ ತೆರಳುತ್ತಿದ್ದ ವೇಳೆ ಸುಹೈಬತ್ ಅವರಿಗೆ ಮನೆಯವರು ಕರೆ ಮಾಡಿದ್ದರು. ಎಚ್ಚರವಾದಾಗ ಪಕ್ಕದಲ್ಲಿ ಇಟ್ಟಿದ್ದ ಬ್ಯಾಗ್ ನಾಪತ್ತೆಯಾಗಿತ್ತು.
ಬ್ಯಾಗ್‌ನಲ್ಲಿ ಬಟ್ಟೆ, ಚಪ್ಪಲಿ, ಐ ಫೋನ್ ಚಾರ್ಜರ್, ಲ್ಯಾಪ್‌ಟಾಪ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಹೋಗಿದ್ದಾಗ ಕಳ್ಳರು ತಮ್ಮ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಸ್ಮಾರ್ಟ್ ಸಿಟಿ, ಎಂಎಲ್‌ಎ ಮೀಟಿಂಗ್, ನಾಲ್ಕು ಪ್ರಮುಖ ಪಾಯಿಂಟ್ ಚರ್ಚೆ