ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 MAY 2024
CYBER CRIME : ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು (Online task fraud) ನಂಬಿ ಉಪನ್ಯಾಸಕರೊಬ್ಬರು 13.33 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜಾಹೀರಾತಿನ ಕೆಳಗಿದ್ದ ADD ಬಟನ್ ಕ್ಲಿಕ್ ಮಾಡಿದ ಭದ್ರಾವತಿಯ ಉಪನ್ಯಾಸಕರೊಬ್ಬರು (ಹೆಸರು ಗೌಪ್ಯ) ಪ್ರಿಯಾ ಎಂಬ ಟೆಲಿಗ್ರಾಂ ಅಕೌಂಟ್‌ಗೆ ಜಾಯಿನ್ ಆಗಿದ್ದರು.
ಆರಂಭದಲ್ಲಿ ವಿಡಿಯೋ ರಿವ್ಯೂಗೆ 120 ರೂ. ಹಣ ಕೊಡುವುದಾಗಿ ನಂಬಿಸಿದ್ದ ಪ್ರಿಯಾ, ಹಣ ಕಳುಹಿಸಿದ್ದರು. ನಂತರ ವಿವಿಧ ಟಾಸ್ಕ್ ಪೂರೈಸಿದರೆ ಹಣ ನೀಡುವುದಾಗಿ ತಿಳಿಸಿದರು. ಒಂದು ಸಾವಿರ ರೂ. ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ್ದಕ್ಕೆ ಉಪನ್ಯಾಸಕನ ಖಾತೆಗೆ 1300 ರೂ. ಹಣ ಬಂದಿತ್ತು. ನಂಬಿಕೆ ಹೆಚ್ಚಾದ ಹಿನ್ನೆಲೆ ಉಪನ್ಯಾಸಕ ವಿವಿಧ ಹಂತದಲ್ಲಿ ಟಾಸ್ಕ್ ಪೂರೈಸಲು 13.33 ಲಕ್ಷ ರೂ. ಹೂಡಿಕೆ ಮಾಡಿದ್ದರು.
ಟಾಸ್ಕ್ ಪೂರೈಸಿದ್ದರು ಹಣ ಮರಳಿ ಬಾರದೆ ಇರುವುದನ್ನು ಉಪನ್ಯಾಸಕ ವಿಚಾರಿಸಿದ್ದರು. ಈ ವೇಳೆ, ವಂಚಕರು ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಲಾರ್ಜ್ ಅಮೌಂಟ್ ಆಕ್ಟಿವೇಷನ್ ಚಾರ್ಜ್ ಪಾವತಿಸಬೇಕು ಸೇರಿದಂತೆ ನಾನಾ ಕಾರಣ ಹೇಳಿದ್ದರು. ಇದರಿಂದ ಅನುಮಾನಗೊಂಡ ಉಪನ್ಯಾಸಕ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತು ಯುವಕನ ಕೊಲೆ, ಘಟನೆ ಕುರಿತು ಎಸ್.ಪಿ ಹೇಳಿದ್ದೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422