ವಿಚಾರಣಾಧೀನ ಕೈದಿ ಮಾತನಾಡಿಸಲು ಶಿವಮೊಗ್ಗದ ಜೈಲಿಗೆ ಬಂದಿದ್ದ ಮಹಿಳೆ, ಪುರುಷ ಜೈಲಿನಲ್ಲೇ ಅರೆಸ್ಟ್‌, ಕಾರಣವೇನು?

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ಬಂದಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್‌ ಆಗಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಅಬ್ದುಲ್ ಮುನಾಫ್ ಅಲಿಯಾಸ್‌ ಮುನ್ನಾ ಎಂಬಾತನನ್ನು ಭೇಟಿಯಾಗಲು ರುಕ್ಸಾರ ಭಾನು ಹಾಗೂ ನಾಸೀರ್ ಕುರೇಷಿ ಎಂಬುವವರು ಆಗಸ್ಟ್ 5ರಂದು ಬೈಕ್‌ನಲ್ಲಿ ಕಾರಾಗೃಹದ ಪ್ರವೇಶ ದ್ವಾರಕ್ಕೆ ಬಂದಿದ್ದರು. ಸಂದರ್ಶನಕ್ಕಾಗಿ ತೆರಳಿದ್ದ ರುಕ್ಸಾರ ಭಾನು ತಂದಿದ್ದ ಬಟ್ಟೆಗಳನ್ನು KSISF ಸಿಬ್ಬಂದಿ ತಪಾಸಣೆ ನಡೆಸಿದರು. ಆಗ ಜೀನ್ಸ್ ಪ್ಯಾಂಟಿನ ಬೆಲ್ಟ್ ಪಟ್ಟಿಯಲ್ಲಿ ಗಮ್ ಟೇಪ್ ಬಳಸಿ ಗಾಂಜಾ ಮತ್ತು ತಂಬಾಕಿನಂತಹ ನಿಷೇಧಿತ ವಸ್ತುಗಳನ್ನು ಮರೆಮಾಡಿ ಕೊಂಡೊಯ್ಯುತ್ತಿರುವುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.  

Shimoga-Central-Jail-Building

ಕೂಡಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ KSISF ಸಿಬ್ಬಂದಿ, ಗಾಂಜಾ ಹಾಗೂ ತಂಬಾಕಿನಂತೆ ಕಾಣುವ ವಸ್ತು, ಜೀನ್ಸ್ ಪ್ಯಾಂಟ್, ಶರ್ಟ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್.ಪಿ ನೀಡಿದ ದೂರಿನ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.