ಗೋಪಾಳದ ಚೆನ್ನಾಂಬಿಕಾ ವೈನ್ಸ್‌ನಲ್ಲಿ ಕಳ್ಳತನ, ಹೇಗಾಯ್ತು ಕೃತ್ಯ? ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಶಿವಮೊಗ್ಗ: ಗೋಪಾಳ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಚೆನ್ನಾಂಬಿಕಾ ವೈನ್ಸ್ ಮದ್ಯದ ಮಳಿಗೆಯ ಮೇಲ್ಛಾವಣಿಯ ತಗಡಿನ ಶೀಟ್ ಬಿಚ್ಚಿ ಕಳ್ಳತನ ಮಾಡಲಾಗಿದೆ. ನಗದು ಹಾಗೂ ಮದ್ಯದ ಬಾಟಲಿಗಳು ಕಳುವಾಗಿವೆ ಎಂದು ಆರೋಪಿಸಲಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಅಕ್ಟೋಬರ್ 15ರ ರಾತ್ರಿ ಮಾಲೀಕರು ಮದ್ಯದ ಅಂಗಡಿಯ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಅಂಗಡಿ ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮಳಿಗೆಯ ಮೇಲ್ಛಾವಣಿಯ ತಗಡಿನ ಶೀಟ್‌ನ ಸ್ಕ್ರೂಗಳನ್ನು ಬಿಚ್ಚಿ, ಪಿ.ಒ.ಪಿ ಶೀಟ್ ಕಳ್ಳರು ಒಳಗೆ ನುಗ್ಗಿದ್ದಾರೆ.

070426-Tunga-Nagara-Police-Station-General-Image.avif

ಅಂಗಡಿಯಲ್ಲಿದ್ದ ₹25,000 ನಗದು, ಸುಮಾರು ₹15,000 ಮೌಲ್ಯದ 4 ರಿಂದ 5 ಮದ್ಯದ ಬಾಟಲಿಗಳು ಕಳ್ಳತನವಾಗಿದೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹40,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಚೆನ್ನಾಂಬಿಕ ವೈನ್ಸ್‌ನ ಮಾಲೀಕ ನಾಗೇಶ್‌ ಅವರು ತುಂಗಾ ನಗರ ಠಾಣೆಗೆ ದೂರು ನೀಡಿದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.