ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಶಿವಮೊಗ್ಗ ನಗರದ ವಿವಿಧ ಲಾಡ್ಜ್’ಗಳಲ್ಲಿ ಪೊಲೀಸರು ಇವತ್ತು ದಿಢೀರ್ ತಪಾಸಣೆ ಆರಂಭಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ಸೂಚನೆ ಮೇರೆಗೆ ತಪಾಸಣಾ ಕಾರ್ಯ ನಡೆಯುತ್ತಿದೆ.
ಶಿವಮೊಗ್ಗ ಬಸ್ ನಿಲ್ದಾಣ ಸುತ್ತಮುತ್ತ ವಿವಿಧ ಲಾಡ್ಜ್’ಗಳಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ಸೂಚನೆ ಮೇರೆಗೆ ತಪಾಸಣೆ ನಡೆಸಲಾಯಿತು. ಡಿವೈಎಸ್’ಪಿ ಪ್ರಶಾಂತೋ ಮುನ್ನೋಳಿ, ಇನ್ಸ್’ಪೆಕ್ಟರ್ ಹರೀಶ್ ಪಟೇಲ್, ದೊಡ್ಡಪೇಟೆ ಠಾಣೆ ಸಬ್ಬಂದಿ ಪರಿಶೀಲನೆ ನಡೆಸಿದರು.
ತಪಾಸಣೆಗೆ ಕಾರಣವೇನು?
ಲಾಡ್ಜ್’ಗಳಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆ ನಡೆಯುತ್ತಿರುವ ಸಂಬಂಧ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವಿವಿಧೆಡೆ ಎಲ್ಲಾ ಲಾಡ್ಜ್’ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಈ ಹಿಂದೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಒದಗಿಸಿರುವ ಗೈಡ್ ಲೈನ್ ಪಾಲನೆ ಮಾಡಲಾಗುತ್ತಿದೆಯೆ ಎಂದು ಪರಿಶೀಲಿಸಿಲು ತಪಾಸಣೆ ಕಾರ್ಯ ನಡೆಸಲಾಯಿತು.
ಇದನ್ನೂ ಓದಿ | ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಲಾಡ್ಜ್’ನಲ್ಲಿ ನಿವೃತ್ತ ಎಂಜಿನಿಯರ್ ಆತ್ಮಹತ್ಯೆ
ಏನೆಲ್ಲ ತಪಸಾಣೆ ಮಾಡಿದರು?
ಲಾಡ್ಜ್’ಗಳಲ್ಲಿ ರಿಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆಯೆ ಎಂದು ಪರಿಶೀಲಿಸಿದರು. ಲಾಡ್ಜ್’ನಲ್ಲಿ ಯಾರೆಲ್ಲ ತಂಗಿದ್ದಾರೆ, ಅವರು ಒದಗಿಸಿರುವ ದಾಖಲೆಗಳೇನು ಎಂಬುದನ್ನು ವೀಕ್ಷಿಸಿದರು. ಅಲ್ಲದೆ ಲಾಡ್ಜ್’ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ಮಾಡಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422