ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 23 OCTOBER 2024 : ಲಾರಿಯಿಂದ ಬ್ಯಾಟರಿ (Battery) ಕಳವು ಮಾಡಿಕೊಂಡು ಹೋಗುವಾಗ, ಸೆಕ್ಯೂರಿಟಿ ಗಾರ್ಡ್ ಕೂಗಿದ್ದಕ್ಕೆ ಬೆದರಿ, ಬೈಕ್ ಮತ್ತು ಬ್ಯಾಟರಿಯನ್ನು ಅಲ್ಲಿಯೇ ಬಿಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಶಿವಮೊಗ್ಗದ ಆಲ್ಕೊಳ ಸಮೀಪದ ಲಗಾನ್ ಕಲ್ಯಾಣ ಮಂಟದ ಮುಂಭಾಗ ಘಟನೆ ನಡೆದಿದೆ.
ಆನಂದ್ ಎಂಬುವವರಿಗೆ ಸೇರಿ ಲಾರಿಯನ್ನು ಲಗಾನ್ ಕಲ್ಯಾಣ ಮಂಟಪದ ಮುಂಭಾಗ ಖಾಲಿ ಜಾಗದಲ್ಲಿ ನಿಲ್ಲಿಸಿದ್ದರು. ಬೈಕ್ನಲ್ಲಿ ಬಂದ ಇಬ್ಬರು ಲಾರಿಯ ಬ್ಯಾಟರಿ ಬಿಚ್ಚಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಜೋರಾಗಿ ಕೂಗಿದಾಗ, ಕಳ್ಳರು ಬ್ಯಾಟರಿ ಮತ್ತು ಅವರು ತಂದಿದ್ದ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ಆನಂದ್ ಅವರ ಬಳಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಬಂಗಾರಪ್ಪ ಜನ್ಮದಿನ, ಮೂವರಿಗೆ ಬಂಗಾರ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
LATEST NEWS
- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

- ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

About The Editor
ನಿತಿನ್ ಆರ್.ಕೈದೊಟ್ಲು















