ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕಿಯಾ ಶೋ ರೂಂಗೆ 38 ಲಕ್ಷ ರೂ. ವಂಚನೆ
SHIMOGA : ಹಳೆ ಕಾರು ಖರೀದಿಸಿ ಗ್ರಾಹಕರಿಗೆ ಹೊಸ ಕಾರು ಮಾರಾಟ ಮಾಡುವ ಎಕ್ಸ್‌ಚೇಂಜ್ ಆಫರ್ ನೆಪದಲ್ಲಿ ಶಿವಮೊಗ್ಗದ ಕಿಯಾ ಶೋ ರೂಂಗೆ 38.35 ಲಕ್ಷ ರೂ. ವಂಚಿಸಲಾಗಿದೆ. ಗ್ರಾಹಕರಿಂದ ಹಳೆ ಕಾರು ಖರೀದಿಗೆ ಸಂಸ್ಥೆಯೊಂದರ ಜೊತೆಗೆ ಕಿಯಾ ಶೋ ರೂಂ ಒಪ್ಪಂದ ಮಾಡಿಕೊಂಡಿತ್ತು. ಆ ಸಂಸ್ಥೆ ಕಾನೂನು ಬಾಹಿರವಾಗಿ ಹಳೆ ಕಾರುಗಳನ್ನು ಖರೀದಿಸಿ, ಕಿಯಾ ಶೋ ರೂಂಗೆ ನಷ್ಟ ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಶ್ನೆ ಮಾಡಿದಾಗ ಕಿಯಾ ಶೋ ರೂಂ ಸಿಬ್ಬಂದಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಾಹನ ತಪಾಸಣೆ, ನಾಲ್ಕು ಗೋವುಗಳ ರಕ್ಷಣೆ
SHIMOGA : ಖಚಿತ ಮಾಹಿತಿ ಮೇರೆಗೆ ವಾಹನ ತಡೆದು ತಪಾಸಣೆ ನಡೆಸಿದ ಪೊಲೀಸರು ಮೂರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗ – ಹಾಯ್ ಹೊಳೆ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಅನುಮತಿ ಇಲ್ಲದೆ ನಾಲ್ಕು ಗೋವುಗಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ವಧೆ ಮಾಡುವ ಉದ್ದೇಶದಿಂದ ಗೋವುಗಳನ್ನು ಕೊಂಡೊಯ್ಯುತ್ತಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ. ಸಯ್ಯದ್ ಮೆಹಬೂಬ್ ಮತ್ತು ಫಕ್ರುದಿನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗೋವುಗಳು ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮುಂದೆ ನಿಲ್ಲಿಸಿದ್ ಬೈಕ್ ಕಳ್ಳತನ
SHIKARIPURA : ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾಗಿದೆ. ಶಿಕಾರಿಪುರ ವಿನಾಯಕ ನಗರದ ಸಿದ್ದೇಶ್ ಎಂಬುವವರಿಗೆ ಸೇರಿದ ಪಲ್ಸರ್ ಎನ್.ಎಸ್ 200 ಬೈಕ್ ಕಳ್ಳತನವಾಗಿದೆ. ಬೆಳಗ್ಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ ಎಂದು ಆರೋಪಿಸಲಾಗಿದೆ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚನೆ, ಕೆಲವರಿಗೆ ಆದೇಶದಿಂದ ವಿನಾಯಿತಿ