ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021
ಸೇತುವೆ ಮೇಲಿನಿಂದ ತುಂಗಾ ಹೊಳೆಗೆ ಜಿಗಿದು, ನಡು ನೀರಲ್ಲಿ ಸಿಲುಕಿದ್ದ ಯುವಕನೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು, ಕಾರ್ಯಾಚರಣೆ ವೀಕ್ಷಿಸಲು ಭಾರಿ ಜನ ಸೇರಿದ್ದರಿಂದ ಸೇತುವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಬೆಕ್ಕಿನಕಲ್ಮಠ ಬಳಿ ಸೇತುವೆ ಮೇಲಿನಿಂದ ಯುವಕನೊಬ್ಬ ತುಂಗಾ ಹೊಳೆಗೆ ಹಾರಿದ್ದಾನೆ. ಆತನನ್ನು ತನ್ವೀರ್ ಎಂದು ಗುರುತಿಸಲಾಗಿದೆ.
ಸೇತುವೆಯಿಂದ ಹಾರಿದನಂತೆ..!
ತನ್ವೀರ್, ಹೊಸ ಸೇತುವೆ ಮೇಲಿಂದ ತುಂಗಾ ಹೊಳೆಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೊಳೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ರೈಲ್ವೆ ಸೇತುವೆ ದಾಟಿ ಪಕ್ಕದ ಗಿಡಗಂಟಿಯ ನಡುವೆ ಸಿಲುಕಿದ್ದ. ನೆರವಿಗಾಗಿ ಕೈ ಬೀಸಿ ಕರೆಯುತ್ತಿದ್ದ.
VIDEO REPORT
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಕಾರ್ಯಾಚರಣೆ ನಡೆಸಿ ತನ್ವೀರ್’ನ ರಕ್ಷಣೆ ಮಾಡಿ, ದಡಕ್ಕೆ ಕರೆತಂದರು. ಸೇತುವೆಯಿಂದ ಜಿಗಿದಿದ್ದರೂ ಅದೃಷ್ಟವಶಾತ್ ತನ್ವೀರ್’ಗೆ ಯಾವುದೆ ತೊಂದರೆಯಾಗಿಲ್ಲ.
‘ಕಾಲು ಜಾರಿ ಬಿದ್ದೆ’
ರಕ್ಷಣಾ ಕಾರ್ಯಾಚಾರಣೆ ಬಳಿಕ ತಾನು ಕಾಲು ಜಾರಿ ಸೇತುವೆಯಿಂದ ಬಿದ್ದಿದ್ದಾಗಿ ತನ್ವೀರ್ ಹೇಳಿಕೊಂಡಿದ್ದಾನೆ. ಆದರೆ ಸೇತುವೆ ತಡೆಗೋಡೆ ಎತ್ತರವಾಗಿದ್ದು, ಜಾರಿ ಹೊಳೆಗೆ ಬೀಳು ಸಾಧ್ಯವಿಲ್ಲ.
ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸೇತುವೆ ಮೇಲೆ ಭಾರಿ ಜನ ಸೇರಿದ್ದರು. ಇದರಿಂದಾಗಿ ಸೇತವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ನಿಯಂತ್ರಿಸಿದರು. ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422