ಶಿವಮೊಗ್ಗ LIVE
ಶಿವಮೊಗ್ಗ: ವ್ಯಕ್ತಿಯೊಬ್ಬರು ತಮ್ಮ ವಾಹನದ ಟ್ರಾಫಿಕ್ ಫೈನ್ (traffic fines) ಎಷ್ಟಿದೆ ಎಂದು ನೋಡಲು ಹೋಗಿ ಬರೋಬ್ಬರಿ ₹11.25 ಲಕ್ಷ ಹಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರ (ಹೆಸರು ಗೌಪ್ಯ) ಮೊಬೈಲ್‌ಗೆ ಅಪರಿಚಿತರು Traffic challan.Apk ಎಂಬ ಫೈಲ್ ಕಳುಹಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗದ ರೈಸ್ ಮಿಲ್ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

ಅದನ್ನು ಇನ್‌ಸ್ಟಾಲ್ ಮಾಡಿದಾಗ ವಾಹನದ ನಂಬರ್ ಕೇಳುವ ಪೇಜ್ ಓಪನ್ ಆಗಿದೆ. ಆದರೆ ಅದರಲ್ಲಿ ಯಾವುದೇ ಮಾಹಿತಿ ಕಾಣಿಸದ ಕಾರಣ ಅವರು ಆಪ್‌ನಿಂದ ಹೊರಬಂದಿದ್ದರು.
ಆದರೆ ಈ ಘಟನೆಯಾಗಿ ಎರಡು ದಿನಗಳ ಅಂತರದಲ್ಲಿ ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹11,25,000 ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
LATEST NEWS
- BREAKING NEWS – ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ

- ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

- ಒಂದು ಲಕ್ಷದ ಸನಿಹಕ್ಕೆ ಅಡಿಕೆ ರೇಟ್ | 13 ಜನವರಿ 2026 | ಇವತ್ತಿನ ಅಡಿಕೆ ಧಾರಣೆ

- ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ, ಕಾರಣವೇನು?
- ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





