ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 25 JULY 2024
ಶಿವಮೊಗ್ಗ ಲೈವ್.ಕಾಂ : ಸರ್ಕಾರಿ ಬಸ್ ನಿಲ್ದಾಣದ (Bus Stand) ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಗುರುತು ಪತ್ತೆಯಾಗದ ಹಿನ್ನೆಲೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ವ್ಯಕ್ತಿಗೆ 45 ರಿಂದ 50 ವರ್ಷ ವಯಸ್ಸಾಗಿದೆ. ಮೃತ ವ್ಯಕ್ತಿಯು 5.06 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕಿಬ್ಬೊಟ್ಟೆಯ ಮೇಲೆ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಕಪ್ಪುಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಅರ್ಧ ತೋಳಿನ ಟೀಶರ್ಟ್, ಕಂದು ಬಣ್ಣದ ಚುಕ್ಕಿಗಳಿರುವ ಲುಂಗಿ ಧರಿಸಿರುತ್ತಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-261414 / 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ ⇓
ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ಇಲ್ಲಿದೆ ಡಿಟೇಲ್ಸ್






