ಶಿವಮೊಗ್ಗ ಲೈವ್
ಸಾಗರ: ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು (Mishap) ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇದನ್ನೂ ಓದಿ » ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ
ಕೆರೆ ಏರಿ ಮೇಲೆ ಅಪಘಾತ ಸಂಭವಿಸಿದ್ದು ಕಾರಿನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್ ಮತ್ತು ಭರತ್ ಎಂಬುವವರಿಗೆ ಗಾಯವಾಗಿದೆ. ಬಸ್ಸಿನ ಮುಂಭಾಗಕ್ಕು ಹಾನಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆರೆಯ ತಡೆಗೋಡೆ ಮೇಲೆ ನಿಂತಿದೆ. ಬಸ್ಸು ರಸ್ತೆಯ ಬದಿಗೆ ಸರಿದಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಖಾಸಗಿ ಬಸ್ಸು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತಿತ್ತು. ಕಾರು ಸಾಗರದ ದಿಕ್ಕಿಗೆ ಹೋಗುತಿತ್ತು. ಘಟನೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:



