ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BENGALURU, 12 AUGUST 2024 : ಮಹಿಳಾ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಇಟ್ಟು ರಹಸ್ಯವಾಗಿ (Hidden) ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದಲ್ಲಿ ಭದ್ರಾವತಿ ಮೂಲದ ಯುವಕನನ್ನು ಬಂಧಿಸಲಾಗಿದೆ. ಬೆಂಗಳೂರಿನ ಥರ್ಡ್ ವೇವ್ ಕಾಫಿಯ ಬಿಇಎಲ್ ರಸ್ತೆಯ ಔಟ್‌ಲೆಟ್‌ನಲ್ಲಿ ಘಟನೆ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಫಿ ಶಾಪ್‌ನ ಸಿಬ್ಬಂದಿ ಭದ್ರಾವತಿಯ ಮನೋಜ್ (23) ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.
ಕಸದ ಬುಟ್ಟಿಯಲ್ಲಿ ಮೊಬೈಲ್
ಕಾಫಿ ಶಾಪ್‌ನ ಮಹಿಳಾ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿತ್ತು. ಮೊಬೈಲ್ ಫ್ಲೈಟ್ ಮೋಡ್‌ನಲ್ಲಿ ಇರಿಸಲಾಗಿತ್ತು. ಮಹಿಳೆಯೊಬ್ಬರು ಇದನ್ನು ಗಮನಿಸಿ ಕಾಫಿ ಶಾಪ್‌ನವರಿಗೆ ತಿಳಿಸಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಮನೋಜ್ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ಕೂಡಲೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಈ ಮಧ್ಯೆ, ಥರ್ಡ್ ವೇವ್ ಕಾಫಿ ಸಂಸ್ಥೆಯು ಮನೋಜ್‌ನನ್ನು ಕೆಲಸದಿಂದ ವಜಾಗೊಳಿಸಿದೆ.
ಇದನ್ನೂ ಓದಿ ⇒ ಅಪಘಾತದಲ್ಲಿ ವಿದ್ಯಾರ್ಥಿ ಸಾವು, ಕುಟುಂಬಕ್ಕೆ ನೆರವಾಗಲು ವಾಟ್ಸಪ್ ಗ್ರೂಪ್ ಶುರು, ಹರಿದು ಬಂತು ನೆರವು