ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019
ರಸ್ತೆ ಮಧ್ಯೆ ನಿಂತು ಡ್ರಾಪ್ ಕೇಳಿದ. ವಾಹನದಿಂದ ಇಳಿಯುವಾಗ ಚಾಲಕನ ಸ್ಮಾರ್ಟ್ ಫೋನನ್ನೇ ಎಗರಿಸಿದ. ಮಾಡಿದ ತಪ್ಪಿಗೆ ಜೈಲುಪಾಲದ ಮೊಬೈಲ್ ಕಳ್ಳ.
ಏನಿದು ಘಟನೆ? ಹೇಗಾಯ್ತು ಕಳ್ಳತನ?
ಭದ್ರಾವತಿಯ ಹೊನ್ನಟ್ಟಿ ಹೊಸೂರು ಗ್ರಾಮದ ಬಸವಣ್ಯಪ್ಪ ಎಂಬುವವರು ಸಿಲಿಂಡರ್ ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಅಂಕೋಲದಿಂದ ಶಿವಮೊಗ್ಗಕ್ಕೆ ಬರುವಾಗ ಶಿಕಾರಿಪುರದ ಬಳಿ ತರಲಘಟ್ಟ ಕ್ಯಾಂಪ್’ನ ರಾಜೇಶ್ ಎಂಬಾತ, ಡ್ರಾಪ್ ಕೇಳಿದ್ದಾನೆ.
ಡ್ರಾಪ್ ಪಡೆದ ರಾಜೇಶ, ಶಿವಮೊಗ್ಗದ ಮಹಾವೀರ ಸರ್ಕಲ್ ಬಳಿ ಬರುತ್ತಿದ್ದಂತೆ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಸಿಗ್ನಲ್ ಇರುವ ಕಾರಣ ಲಾರಿ ನಿಧಾನವಾಗುತ್ತಿದ್ದಂತೆ, ಬಾನೆಟ್ ಮೇಲೆ ಇದ್ದ ಚಾಲಕ ಬಸವಣ್ಯಪ್ಪ ಅವರ ಮೊಬೈಲನ್ನು ಎಗರಿಸಿದ್ದಾನೆ. ಕೂಡಲೇ ಲಾರಿಯಿಂದ ಕೆಳಗಿಳಿದು ಪರಾರಿಯಾಗಿದ್ದಾನೆ.
22,300 ರೂ. ಬೆಲೆ ಸ್ಮಾರ್ಟ್ ಫೋನ್ ಕಳ್ಳತನವಾಗಿದೆ ಎಂದು ಲಾರಿ ಚಾಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ರಾಜೇಶನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Mobile Thief arrested in Shimoga by Jayanagara Police. Shivamogga Live Report.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422