ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ 50 ಸಾವಿರ ರೂ. ಹಣ (Money) ಕಳ್ಳತನ ಮಾಡಲಾಗಿದೆ. ಗೋಪಾಳದ ಪರಮೇಶ್ವರಪ್ಪ ಎಂಬುವವರ ಜೇಬಿನಲ್ಲಿದ್ದ ಹಣ ಕಳುವಾಗಿದೆ.
ಪರಮೇಶ್ವರಪ್ಪ ಕೃಷಿ ಪಂಪ್ ಸೆಟ್ ಖರೀದಿಗೆಂದು ಬ್ಯಾಂಕ್‌ನಿಂದ 50 ಸಾವಿರ ರೂ. ಹಣ ಬಿಡಿಸಿಕೊಂಡು ಬಂದಿದ್ದರು. ಹೊನ್ನಾಳಿಗೆ ತೆರಳಬೇಕಿದ್ದರಿಂದ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ಹತ್ತುವಾಗ ರಶ್ ಇತ್ತು. ಆದರೂ ಪರಮೇಶ್ವರಪ್ಪ ಅವರು ಬಸ್ ಏರಿ, ಸೀಟ್ ಹಿಡಿದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸ್ಸು ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಬಂದಿದ್ದು, ಪರಮೇಶ್ವರಪ್ಪ ಟಿಕೆಟ್ ಮಾಡಿಸಲು ಹಣ ತೆಗೆಯಲು ಜೇಬಿಗೆ ಕೈ ಹಾಕಿದಾಗ ಹಣ ಇರಲಿಲ್ಲ. ಕೂಡಲೆ ಬಸ್ ಇಳಿದು ನಿಲ್ದಾಣಕ್ಕೆ ಹಿಂತಿರುಗಿ ಹುಡುಕಿದರೂ ಹಣ ಸಿಕ್ಕಿರಲಿಲ್ಲ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ, ತುಸು ತಂಪಾದ ವಾತಾವರಣ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?


LATEST NEWS
- ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್ಗೆ ಕಾದಿತ್ತು ಶಾಕ್, ಆಗಿದ್ದೇನು?

- ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್ ರಚನೆ, ಯಾರಿಗೆ ಯಾವ ಜವಾಬ್ದಾರಿ?

- ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

- ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

- ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

About The Editor
ನಿತಿನ್ ಆರ್.ಕೈದೊಟ್ಲು















ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕಾಮೆಂಟ್ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?