ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 MARCH 2024
SORABA : ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದ 1.30 ಲಕ್ಷ ರೂ. ಹಣ ಕಳ್ಳತನವಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಗ್ಯಾರೇಜ್ ಒಂದರ ಮುಂದೆ ಘಟನೆ ಸಂಭವಿಸಿದೆ.
ಸಮನವಳ್ಳಿಯ ನಾಗರಾಜ್ ಎಂಬುವವರು ಕೆನರಾ ಬ್ಯಾಂಕ್ನಿಂದ 1.30 ಲಕ್ಷ ರೂ. ಹಣ ಬಿಡಿಸಿಕೊಂಡಿದ್ದರು. ಅದನ್ನು ಕವರ್ ಒಂದರಲ್ಲಿ ಹಾಕಿ ಬೈಕ್ನ ಹ್ಯಾಂಡಲ್ಗೆ ಸಿಕ್ಕಿಸಿದ್ದರು. ಬ್ಯಾಂಕ್ ಪಕ್ಕದ ಗ್ಯಾರೇಜ್ ಮುಂದೆ ಬೈಕ್ ನಿಲ್ಲಿಸಿ ಗ್ಯಾರೇಜಿನವರ ಜೊತೆಗೆ ಮಾತನಾಡುತ್ತಿದ್ದರು. ಬೈಕ್ ಕಡೆಗೆ ತಿರುಗಿ ನೋಡಿದಾಗ ಹ್ಯಾಂಡಲ್ಗೆ ಸಿಕ್ಕಿಸಿದ್ದ ಕವರ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ನಾಗರಾಜ್, ಬಳಿಕ ದೂರು ನೀಡಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಗ್ನಿಶಾಮಕ ಅಧಿಕಾರಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422